ಕುಷ್ಟಗಿ ಶ್ರೀಅಡವಿ ಮುಖ್ಯ ಪ್ರಾಣೇಶಗೆ ವಿಶೇಷ ಅಲಂಕಾರ ಮಾಡಿರುವುದು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹೋಮ
ವೇದಮಂತ್ರ
ಪಠಣ
ಕುಷ್ಟಗಿ: ಪಟ್ಟಣದ ಶ್ರೀಅಡವಿ ಮುಖ್ಯ ಪ್ರಾಣೇಶ ಜಾತ್ರಾ ಮಹೋತ್ಸವದ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ನಡೆದವು.
ಬೆಳಗ್ಗೆ ಶ್ರೀಅಡವಿ ಮುಖ್ಯ ಪ್ರಾಣೇಶನ ಉತ್ಸವ ಮೂರ್ತಿಯನ್ನು ಅರ್ಚಕರ ಮನೆಯಿಂದ ದೇವಸ್ಥಾನದವರೆಗೆ ಭಜನೆ ಹಾಗೂ ಮೆರವಣಿಗೆಯೊಂದಿಗೆ ಕರೆತರಲಾಯಿತು. ನಂತರ ಧ್ವನಂತರಿ ಹೋಮ, ವೇದಮಂತ್ರ ಪಠಣದೊಂದಿಗೆ ಕಂಕನ ಬಂಧನ ಹಾಗೂ ಗರುಡ ಪಟ ನಂತರ ನೈವೇದ್ಯ ತೀರ್ಥ ಪ್ರಸಾದ ನಡೆಯಿತು.
ಸಂಜೆ ಶ್ರೀಧರ ಆಚಾರ್ ಪುರಾಣಿಕ ಹಾಗೂ ಶ್ರೀಸತ್ಯ ಆಚಾರ ಪುರಾಣಿಕ ಇವರಿಂದ ವ್ಯಾಸ-ದಾಸ ಸಾಹಿತ್ಯಗಳ ಪ್ರಕಾರ ಕಲಿಯುಗದಲ್ಲಿ ಹರಿನಾಮ ಸಂಕೀರ್ತನೆ ಮಹತ್ವ ಎನ್ನುವ ವಿಶೇಷ ಕಾರ್ಯಕ್ರಮ ನಡೆಯಿತು. ಸಾಮೂಹಿಕ ಪಾರಾಯಣಗಳು ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ವಾಯುಸ್ತುತಿ ಪುರಶ್ಚರಣ ಮಧು ಅಭಿಷೇಕ, ಪಂಚಾಮೃತ ವೇದಪಠಣ, ಪಲ್ಲಕ್ಕಿ ಉತ್ಸವದೊಂದಿಗೆ, ದುರ್ಗಾ ಹೋಮ, ಪುರ್ಣಾವತಿ ನೈವೇದ್ಯ ತೀರ್ಥ ಪ್ರಸಾದ ಸೇರಿದಂತೆ ನಾನಾ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.