ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮ

ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಸ.ಹಿ.ಪ್ರಾ.ಶಾಲೆ ವಿದ್ಯಾರ್ಥಿಗಳಿಗೆ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸವಿತಾ ಸವಡಿ ಕ್ರೀಡಾ ಸಮವಸ್ತ್ರಗಳನ್ನು ಗುರುವಾರ ವಿತರಿಸಿದರು. ಕಾರ್ಯದರ್ಶಿ ಆಸ್ಮಾ, ಐಎಸ್‌ಒ ಕೆ.ಸುಜಾತಾ ರೆಡ್ಡಿ, ಪ್ರಮುಖರಾದ ಪ್ರಿಯಾಕುಮಾರಿ, ದಾಕ್ಷಾಯಿಣಿ ಇತರರಿದ್ದರು.
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಸ.ಹಿ.ಪ್ರಾ.ಶಾಲೆ ವಿದ್ಯಾರ್ಥಿಗಳಿಗೆ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸವಿತಾ ಸವಡಿ ಕ್ರೀಡಾ ಸಮವಸ್ತ್ರಗಳನ್ನು ಗುರುವಾರ ವಿತರಿಸಿದರು. ಕಾರ್ಯದರ್ಶಿ ಆಸ್ಮಾ, ಐಎಸ್‌ಒ ಕೆ.ಸುಜಾತಾ ರೆಡ್ಡಿ, ಪ್ರಮುಖರಾದ ಪ್ರಿಯಾಕುಮಾರಿ, ದಾಕ್ಷಾಯಿಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇನ್ನರ್ ವ್ಹೀಲ್ ಕ್ಲಬ್ ತಾಲೂಕು ಘಟಕ ಅಧ್ಯಕ್ಷೆ ಸವಿತಾ ಸವಡಿ ಹೇಳಿಕೆ
ಗಂಗಾವತಿ: ಇನ್ನರ್ ವ್ಹೀಲ್ ಕ್ಲಬ್‌ನಿಂದ ದತ್ತು ಪಡೆದಿದ್ದ ವಡ್ಡರಹಟ್ಟಿಯ ಸ.ಹಿ.ಪ್ರಾ. ಶಾಲಾಭಿವೃದ್ಧಿಗೆ ಸಾಧ್ಯವಾದಷ್ಟು ನೆರವು ಕಲ್ಪಿಸಲಾಗಿದೆ ಎಂದು ಕ್ಲಬ್ ತಾಲೂಕು ಘಟಕದ ಅಧ್ಯಕ್ಷೆ ಸವಿತಾ ಸವಡಿ ಹೇಳಿದರು.
ತಾಲೂಕಿನ ವಡ್ಡರಹಟ್ಟಿ ಸ.ಹಿ.ಪ್ರಾ. ಶಾಲೆಯ ಏಳನೇ ತರಗತಿಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 15 ಸಾವಿರ ರೂ. ವೆಚ್ಚದಲ್ಲಿ ಕ್ರೀಡಾ ಸಮವಸ್ತ್ರ ವಿತರಿಸಿ ಗುರುವಾರ ಮಾತನಾಡಿದರು. ಕ್ಲಬ್ ಸದಸ್ಯರ ಸಹಕಾರದಿಂದ ಶಾಲೆಗೆ ಸಾಧ್ಯವಾದಷ್ಟು ನೆರವು ಕಲ್ಪಿಸಿದ ತಪ್ತಿಯಿದ್ದು, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಐಎಸ್‌ಒ ಕೆ.ಸುಜಾತಾ ರೆಡ್ಡಿ ಮಾತನಾಡಿ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದರೂ ಇನ್ನರ್ ವ್ಹೀಲ್ ಕ್ಲಬ್‌ನಿಂದ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗಿದೆ. ಏಳನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ರಯಾನ್‌ಗೆ ಮುಂದಿನ ವಿದ್ಯಾಭ್ಯಾಸ ಅನುಕೂಲಕ್ಕಾಗಿ ವೈಯಕ್ತಿಕವಾಗಿ ಐದು ಸಾವಿರ ರೂ. ಪ್ರೋತ್ಸಾಹಧನ ನೀಡಿದ್ದೇನೆ. ವಿದ್ಯಾರ್ಥಿಗಳು ಇದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಬೇಕು. ಭವಿಷ್ಯದಲ್ಲಿ ಉತ್ತಮ ಸ್ಥಾನ ಪಡೆದು ಇನ್ನೊಬ್ಬರಿಗೆ ಸಹಾಯ ಮಾಡುವಂತಾಗಬೇಕಿದೆ ಎಂದರು.
ಕ್ಲಬ್ ಕಾರ್ಯದರ್ಶಿ ಆಸ್ಮಾ, ಪ್ರಮುಖರಾದ ಎಂ.ಪ್ರಿಯಾಕುಮಾರಿ, ದಾಕ್ಷಾಯಿಣಿ, ನಿರ್ಮಲಾ, ಸೀಮಾ, ಸಂಗೀತಾ, ತನುಜಾ, ಮುಖ್ಯ ಶಿಕ್ಷಕ ಯಲ್ಲನಗೌಡ, ಶಿಕ್ಷಕರಾದ ಸಂಧ್ಯಾ, ಶಬಾನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net