ಮಾನಸಿಕ ನೆಮ್ಮದಿಗೆ ಆಧ್ಯಾತ್ಮಿಕ ಚಿಂತನೆ ಅಗತ್ಯ

ಕಾರಟಗಿಯ ಶರಣ ಬಸವೇಶ್ವರ ಮಂಗಲ ಮಂಟಪದಲ್ಲಿ ಶರಣ ಬಸವೇಶ್ವರ ಚರಿತಾಮೃತ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಹಿರೇಮಠದ ಮರುಳಸಿದ್ಧಯ್ಯ ಸ್ವಾಮಿ ಚಾಲನೆ ನೀಡಿದರು. ಪ್ರಮುಖರಾದ ಗುಂಡಪ್ಪ ಕುಳಗಿ, ಜಗದೀಶ ಅವರಾಧಿ, ಮಲ್ಲಿಕಾರ್ಜುನ ಕೊಟಗಿ, ಪಂಪಯ್ಯಸ್ವಾಮಿ, ಶಿವಾಚಾರ್ಯರು ಇತರರಿದ್ದರು.
ಕಾರಟಗಿಯ ಶರಣ ಬಸವೇಶ್ವರ ಮಂಗಲ ಮಂಟಪದಲ್ಲಿ ಶರಣ ಬಸವೇಶ್ವರ ಚರಿತಾಮೃತ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಹಿರೇಮಠದ ಮರುಳಸಿದ್ಧಯ್ಯ ಸ್ವಾಮಿ ಚಾಲನೆ ನೀಡಿದರು. ಪ್ರಮುಖರಾದ ಗುಂಡಪ್ಪ ಕುಳಗಿ, ಜಗದೀಶ ಅವರಾಧಿ, ಮಲ್ಲಿಕಾರ್ಜುನ ಕೊಟಗಿ, ಪಂಪಯ್ಯಸ್ವಾಮಿ, ಶಿವಾಚಾರ್ಯರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶರಣ ಬಸವೇಶ್ವರ
  • ಪುರಾಣ
  • ಪ್ರವಚನಕ್ಕೆ ಚಾಲನೆ

ಕಾರಟಗಿ:

ಆಧುನಿಕ ಭರಾಟೆ ಹಾಗೂ ಒತ್ತಡದ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು ಮತ್ತು ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಶ್ರಾವಣ ಮಾಸದ ಪುರಾಣ ಪ್ರವಚನಗಳು ಅತ್ಯಗತ್ಯ ಎಂದು ಹಿರೇಮಠದ ವೇ.ಮೂ. ಮರುಳಸಿದ್ದಯ್ಯ ಸ್ವಾಮಿ ಹೇಳಿದರು.

ಪಟ್ಟಣದ ಶರಣ ಬಸವೇಶ್ವರ ಮಂಗಲ ಮಂಟಪದಲ್ಲಿ ಶುಕ್ರವಾರ ಸಂಜೆ ಶ್ರಾವಣ ಮಾಸದ ನಿಮಿತ್ತ ಆಯೋಜಿಸಿದ್ದ ಕಲಬುರಗಿ ಶರಣ ಬಸವೇಶ್ವರರ 52ನೇ ವರ್ಷದ ಚರಿತಾಮೃತ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಾಣಿಜ್ಯ ಪಟ್ಟಣದಲ್ಲಿ ನಿತ್ಯ ವ್ಯವಹಾರ ಮತ್ತು ಒತ್ತಡದ ನಡುವೆಯೂ ಸ್ಥಳೀಯ ಉದ್ಯಮಿಗಳು, ವರ್ತಕರು ಹಾಗೂ ರೈತರು ಸೇರಿ ಪುರಾಣ ಸಮಿತಿಯ ಮೂಲಕ ಕಳೆದ 51 ವರ್ಷಗಳಿಂದ ಶರಣರ ಪುರಾಣ ಪ್ರವಚನ ನಡೆಸಿ, ಇದೀಗ 52ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಸಾಧನೆ ಎಂದರು.
ಇದಕ್ಕೂ ಮುನ್ನ ಬೆಳಿಗ್ಗೆ ದೇವಸ್ಥಾನ ಹಾಗೂ ಮಹಾದ್ವಾರಕ್ಕೆ ಕಳಸಾರೋಹಣ ಮತ್ತು ಧ್ವಜಾರೋಹಣ ನೆರವೇರಿತು.
ಕಾರ್ಯಕ್ರಮದಲ್ಲಿ ಪುರಾಣ ಸಮಿತಿಯ ಅಧ್ಯಕ್ಷ ಗುಂಡಪ್ಪ ಕುಳಗಿ, ಉದ್ಯಮಿ ಜಗದೀಶ ಅವರಾಧಿ, ಮಲ್ಲಿಕಾರ್ಜುನ ಕೊಟಗಿ, ಪಂಪಯ್ಯಸ್ವಾಮಿ ಚೆಳ್ಳೂರುಮಠ, ಶರಣಪ್ಪ ಗದ್ದಿ, ಶರಣಪ್ಪ ಅಂಗಡಿ, ಅಮರೇಶ ಕಟಾಂಬ್ಲಿ, ವೀರಶಯ್ಯಸ್ವಾಮಿ ಯರಡೋಣಿ, ಅರ್ಚಕ ಮುತ್ತಯ್ಯಸ್ವಾಮಿ, ಪ್ರವಚನಕಾರ ಶಿವಾಚಾರ್ಯರು, ಪುರಾಣ ಪಠಣಕಾರ ಧರ್ಮರಾಜ ಕಲ್ಲೂರ, ತಬಲಾವಾದಕ ಶಂಕ್ರಯ್ಯ ಸ್ವಾಮಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net