ಬದುಕನ್ನು ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ

ಬೆಟಗೇರಿಯಲ್ಲಿ ಸಪ್ತ ಭಜನೆ ಕಾರ್ಯಕ್ರಮದ ನಿಮಿತ್ತ ಪ್ರವಚನ ಕಾರ್ಯಕ್ರಮ ನಡೆಯಿತು. ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಪ್ರಮುಖರಾದ ಗುರುಬಸಯ್ಯ ಸ್ವಾಮಿ ಬ್ರಹ್ಮ ಮಠ, ಶ್ರೀ ಮುತ್ತಯ್ಯಜ್ಜ, ಶ್ರೀನಿವಾಸ, ಚನ್ನಪ್ಪ, ಚನ್ನಬಸಪ್ಪ , ಚಂದ್ರಶೇಖರ, ಮಲ್ಲಿಕಾರ್ಜುನ ಇತರರಿದ್ದರು.
ಬೆಟಗೇರಿಯಲ್ಲಿ ಸಪ್ತ ಭಜನೆ ಕಾರ್ಯಕ್ರಮದ ನಿಮಿತ್ತ ಪ್ರವಚನ ಕಾರ್ಯಕ್ರಮ ನಡೆಯಿತು. ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಪ್ರಮುಖರಾದ ಗುರುಬಸಯ್ಯ ಸ್ವಾಮಿ ಬ್ರಹ್ಮ ಮಠ, ಶ್ರೀ ಮುತ್ತಯ್ಯಜ್ಜ, ಶ್ರೀನಿವಾಸ, ಚನ್ನಪ್ಪ, ಚನ್ನಬಸಪ್ಪ , ಚಂದ್ರಶೇಖರ, ಮಲ್ಲಿಕಾರ್ಜುನ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಆಶೀರ್ವಚನ
  • ಮಳೆಗಾಗಿ ಪ್ರಾರ್ಥಿಸಿ ಸಪ್ತ ಭಜನೆ
ಅಳವಂಡಿ: ಭಗವಂತನ ನಾಮಸ್ಮರಣೆ ಮತ್ತು ಭಜನೆಯಿಂದ ಮನಸ್ಸಿಗೆ ಶಾಂತಿ ದೊರೆಯುಲಿದೆ. ಜತೆಗೆ, ಬದುಕನ್ನು ಸನ್ಮಾರ್ಗದತ್ತ ಕೊಂಡೊಯ್ಯಲಿದೆ ಎಂದು ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.
ಬೆಟಗೇರಿಯಲ್ಲಿ ಶನಿವಾರ ಮಳೆಗಾಗಿ ಪ್ರಾರ್ಥಿಸಿ ಸಪ್ತ ಭಜನೆ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬದುಕಿಗೆ ಬೆಳಕಾಗಿರುವ ಭಗವಂತನನ್ನು ಸ್ಮರಿಸಿ, ನಿತ್ಯ ಧಾರ್ಮಿಕ ಚಿಂತನೆ ಹಾಗೂ ಸತ್ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬೇಕು.
ಸಪ್ತ ಭಜನೆಗೆ ಒಳ್ಳೆಯ ಮಾರ್ಗದತ್ತ ಕರೆದೊಯ್ಯುವ ಶಕ್ತಿ ಇದೆ. ಭಜನೆ ಹಾಗೂ ಭಗವಂತನ ನಾಮಸ್ಮರಣೆಯಿಂದ ಮನುಷ್ಯನಿಗೆ ಸಾತ್ವಿಕ ಭಾವನೆಗಳು ಬೆಳೆಯುತ್ತವೆ. ಓಂ ನಮಃ ಶಿವಾಯ ಮಂತ್ರದ ಪಠಣದಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ. ಸುತ್ತಲೂ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಪ್ರಮುಖರಾದ ಶ್ರೀ ಗುರುಬಸಯ್ಯಸ್ವಾಮಿ ಬ್ರಹ್ಮಮಠ, ಶ್ರೀ ಮುತ್ತಯ್ಯಜ್ಜ, ಶ್ರೀನಿವಾಸ ಪಾತರದ, ಚನ್ನಪ್ಪ ಚಕ್ಕಡಿ, ಚನ್ನಬಸಪ್ಪ ಗುಳದಳ್ಳಿ, ಚಂದ್ರಶೇಖರ ಕೋರಣ್ಣವರ, ಬಸಲಿಂಗಯ್ಯ ಬನ್ನಿಮಠ, ಈರಣ್ಣ ಬಿನ್ನಾಳ, ಬಸಪ್ಪ, ಅಂದಪ್ಪ ಚಕ್ಕಡಿ, ಶರಣಪ್ಪ ಮತ್ತೂರು, ಮಲ್ಲಿಕಾರ್ಜುನ ಯತ್ನಳ್ಳಿ, ಮಂಜುನಾಥ ಚಕ್ಕಡಿ, ರಾಜೀವ ಯತ್ನಳ್ಳಿ, ಮಂಜು ಮಳೆಕೊಪ್ಪ, ಹನುಮರೆಡ್ಡಿ ಬೆಲ್ಲಾಡಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net