ರೇಣುಕಾದೇವಿಗೆ ವಿಶೇಷ ಪೂಜೆ

ಬನದ ಹುಣ್ಣಿಮೆ ನಿಮಿತ್ತ ಕನಕಗಿರಿಯ 3ನೇ ವಾರ್ಡ್‌ನಲ್ಲಿರುವ ಶ್ರೀ ರೇಣುಕಾದೇವಿ ದೇವಸ್ಥಾನದಲ್ಲಿ ದೇವಿಗೆ ಅಲಂಕರಿಸಿರುವುದು.
ಬನದ ಹುಣ್ಣಿಮೆ ನಿಮಿತ್ತ ಕನಕಗಿರಿಯ 3ನೇ ವಾರ್ಡ್‌ನಲ್ಲಿರುವ ಶ್ರೀ ರೇಣುಕಾದೇವಿ ದೇವಸ್ಥಾನದಲ್ಲಿ ದೇವಿಗೆ ಅಲಂಕರಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕನಕಗಿರಿ 33ನೇ ವರ್ಷದ ಮುತ್ತೈದೆ ಕಾರ್ಯಕ್ರಮ
  • ದೇವಿ ದರ್ಶನ ಅನ್ನ ಸಂತರ್ಪಣೆ
ಕನಕಗಿರಿ: ಬನದ ಹುಣ್ಣಿಮೆ ನಿಮಿತ್ತ ಪಟ್ಟಣದ 3ನೇ ವಾರ್ಡ್‌ನ ಪುಷ್ಕರಣಿ ಬಳಿಯ ಶ್ರೀ ರೇಣುಕಾದೇವಿ ದೇವಸ್ಥಾನದಲ್ಲಿ 33ನೇ ವರ್ಷದ ಮುತ್ತೈದೆ (ಮಾಂಗಲ್ಯ) ಕಾರ್ಯಕ್ರಮ ಶನಿವಾರ ನೆರವೇರಿತು.
ಕಾರ್ಯಕ್ರಮದ ನಿಮಿತ್ತ ದೇವಸ್ಥಾನವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಿ ಮೂರ್ತಿಯನ್ನು ಬೆಳ್ಳಿಯ ಆಭರಣಗಳಿಂದ ಅಲಂಕಾರ, ವಿಶೇಷ ಪೂಜೆ ಸೇರಿ ನಾನಾ ಧಾರ್ಮಿಕ ಕೈಂಕರ್ಯಗಳು ನಡೆದವು. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ನೂರಾರು ಭಕ್ತರು ದೇವಿ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.
ದೇವಿ ಆರಾಧಕ ಕನಕಪ್ಪ ನಾಯಕ, ಭಕ್ತರಾದ ಹುಲಗಪ್ಪ ಕೇಸರಹಟ್ಟಿ, ಹನುಮಂತ, ಸಣ್ಣ ಕನಕಪ್ಪ ನಾಯಕ, ಹುಲುಗಪ್ಪ ಬೆಣಕಲ್, ಕನಕರಡ್ಡಿ, ಹೊನ್ನೂರಸಾಬ್ ಸುಳೇಕಲ್, ಭೀಮರಡ್ಡಿ, ಸುರೇಶ ತೆಗ್ಯಾಳ್, ಯಮನೂರ ಮೇದಾರ, ಶಿವಕುಮಾರ್ ತಂಗಡಗಿ, ಕನಕರಾಯ ಬಂಡಿಗಿ, ಹೊನ್ನೂರ್ ಹುಸೇನ್, ಸಿಖಂದರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net