ಗಂಗಾವತಿ ತಾಲೂಕಿನ ಸಂಗಾಪುರದ ಕಣಿವೆ ಶ್ರೀ ಆಂಜನೇಯ ಸ್ವಾಮಿಗೆ ದೇವಾಲಯ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ದೇವಾಲಯ ಸಮಿತಿ ಸದಸ್ಯರಾದ ಗೋಪಾಲಸ್ವಾಮಿ, ಲಿಂಗಪ್ಪ ಜನಾದ್ರಿ, ಶ್ರೀನಿವಾಸ ಇತರರಿದ್ದರು.
ಗಂಗಾವತಿ: ತಾಲೂಕಿನ ಸಂಗಾಪುರದ ಕಣಿವೆ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದಲ್ಲಿನ ಮೂರ್ತಿಗೆ ಅಭಿಷೇಕ, ಹೂವಿನ ಅಲಂಕಾರ, ಹೋಮ, ವಿಶೇಷ ಪೂಜೆ, ಹನುಮಾನ್ ಚಾಲೀಸಾ ಪಾರಾಯಣ, ನಿರಂತರ ಭಜನೆ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪರಿಸರದ ಮಡಿಲಲ್ಲಿರುವ ದೇವಾಲಯಕ್ಕೆ ಇತಿಹಾಸವಿದ್ದು, ಸಂಕಷ್ಟ ನಿವಾರಣಾ ಆಂಜನೇಯ ಮೂರ್ತಿಯಿದೆ. ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿದ್ದು, ಪರಿಸರ ರಕ್ಷಣೆ ಪೂರಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ದೇವಾಲಯ ಸಮಿತಿ ಸದಸ್ಯರಾದ ಗೋಪಾಲಸ್ವಾಮಿ, ಲಿಂಗಪ್ಪ ಜನಾದ್ರಿ, ಶ್ರೀನಿವಾಸ, ನಾಗರಾಜ್, ರಾಜು, ತಿಪ್ಪಣ್ಣ ಲಮಾಣಿ, ಯಮನೂರಪ್ಪ ಸಂಗಾಪುರ, ನಾಗೇಶರಾವ್ ಸೇರಿ ಗಂಗಾವತಿ ಮತ್ತು ಸಂಗಾಪುರ ಗ್ರಾಪಂ ವ್ಯಾಪ್ತಿಯ ಭಕ್ತರಿದ್ದರು.