ಅಳವಂಡಿ: ಸಮೀಪದ ಭೈರಾಪುರದಲ್ಲಿ ಶ್ರೀ ಹುಲಿಗೆಮ್ಮದೇವಿ ಜಾತ್ರೋತ್ಸವ ನಿಮಿತ್ತ ಗಂಗಾಪೂಜೆ, ಕುಂಭ ಮೆರವಣಿಗೆ ಮಂಗಳವಾರ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಮಹಿಳೆಯರ ಕಳಸ, ಕುಂಭ ಹಾಗೂ ವಾದ್ಯ ಮೇಳದೊಂದಿಗೆ ಗಂಗಾಪೂಜೆ ಸಲ್ಲಿಸಲಾಯಿತು. ಅನ್ನದಾಸೋಹ ಸೇವೆ ನಡೆಯಿತು. ಗ್ರಾಮಸ್ಥರು ದೇವಿಗೆ ಉಡಿ ತುಂಬಿ ಹರಕೆ ಸಲ್ಲಿಸಿದರು.