ಬಾಳಗಾರು ಶ್ರೀಪಾದರಿಂದ ವಿಶೇಷ ಪೂಜೆ

ಕುಷ್ಟಗಿ ಅಡವಿರಾಯ ದೇವಸ್ಥಾನದಲ್ಲಿ ಬಾಳಗಾರು ಮಠಾಧೀಶ ಅಕ್ಷ್ಯೋಭ್ಯರಾಮಪ್ರಿಯ ತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು.
ಕುಷ್ಟಗಿ ಅಡವಿರಾಯ ದೇವಸ್ಥಾನದಲ್ಲಿ ಬಾಳಗಾರು ಮಠಾಧೀಶ ಅಕ್ಷ್ಯೋಭ್ಯರಾಮಪ್ರಿಯ ತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗ್ಗೆ
  • ಅಡವಿರಾಯ
  • ಮೂರ್ತಿಗೆ
ಕುಷ್ಟಗಿ: ಪಟ್ಟಣದ ಅಡವಿ ಮುಖ್ಯ ಪ್ರಾಣ ದೇವರ(ಅಡವಿರಾಯ) ದೇವಸ್ಥಾನಕ್ಕೆ ಭಾನುವಾರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬಾಳಗಾರು ಮಠಾಧೀಶ ಅಕ್ಷ್ಯೋಭ್ಯರಾಮಪ್ರಿಯ ತೀರ್ಥ ಶ್ರೀಪಾದರು ಅಡವಿರಾಯನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಆಶೀರ್ವದಿಸಿದರು.
ಬೆಳಗ್ಗೆ ಅಡವಿರಾಯ ಮೂರ್ತಿಗೆ ಮಧು ಅಭಿಷೇಕ ನೆರವೇರಿಸಲಾಯಿತು. ನಂತರ ಸಾಮೂಹಿಕ ಪಾದಪೂಜೆ, ಸಂಸ್ಥಾನ ಪೂಜೆ, ಮಹಾ ನೈವೇದ್ಯ, ತೀರ್ಥ ಪ್ರಸಾದ ಇತರ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪಯ್ಯ ದೇಸಾಯಿ, ಪ್ರಮುಖರಾದ ರಾಜಣ್ಣ ತಿಕೋಟಿಕರ್, ಜಯತೀರ್ಥಾಚಾರ್, ಅರ್ಚಕರಾದ ವಾದಿರಾಜಾಚಾರ್ ಪೂಜಾರ್, ವಿಜಯೇಂದ್ರಾಚಾರ್ ಪೂಜಾರ್, ಹನುಮೇಶ ಆಚಾರ್ ವಜ್ರಬಂಡಿ, ಶ್ರೀನಿವಾಸಮೂರ್ತಿ ದೇಸಾಯಿ, ಗೋಪಾಲರಾವ್ ಬಿಜಕಲ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net