ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲ ಬಾರಿಗೆ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಹಿಸಿದ್ದು, 25 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀೆ ಇದೆ. ವಧು&ವರರ ಅನ್ವೇಷಣೆ ಮಳಿಗೆ, ಕಿತ್ತೂರು ರಾಣಿ ಚನ್ನಮ್ಮ ಹೆಸರಿನಲ್ಲಿ ಒಬ್ಬ ಸಾಧಕರಿಗೆ ಪ್ರಶಸ್ತಿ, ರಕ್ತದಾನ ಶಿಬಿರ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಜಾತ್ರೆಗೆ ಬಂದವರಿಗೆಲ್ಲ ಕಂಕಣ ಕಟ್ಟಿ, ವಿಭೂತಿ ಹಚ್ಚಲಾಗುವುದು. ಕೇಂದ್ರ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ 200ರೂ. ಮುಖಬೆಲೆಯ ನಾಣ್ಯವನ್ನು ಸಾಂಕೇತಿಕವಾಗಿ ಮತ್ತೆ ಬಿಡುಗಡೆಗೊಳಿಸುತ್ತೇವೆ ಎಂದರು.