ಸಮಾಜಮುಖಿ ಬರಹಕ್ಕೆ ಆದ್ಯತೆ ಸಿಗಲಿ

ಗಂಗಾವತಿ ಕಸಾಪ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಕ್ರಿಯಾಶೀಲ ಲೇಖಕಿಯ ಸಂಘ ಮತ್ತು ಮಹಿಳಾ ಕವಿಗೋಷ್ಠಿ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರನ್ನು ಮಂಗಳವಾರ ಸನ್ಮಾನಿಸಲಾಯಿತು. ರಾಜವಂಶಸ್ಥೆ ಲಲಿತಾರಾಣಿರಾಯಲು, ಕೆಸಿಎಸ್ ಮಹಿಳಾ ಪದವಿ ಕಾಲೇಜಿ ಪ್ರಾಧ್ಯಾಪಕಿ ಡಾ.ವಾಣಿಶ್ರೀ ಪಾಟೀಲ್, ಸಾಹಿತಿ ಸಿ.ಮಹಾಲಕ್ಷ್ಮಿ ಇತರರಿದ್ದರು.

Published on
ಗಂಗಾವತಿ: ಸೃಜನಶೀಲ ಸಾಹಿತ್ಯ ಸಮಾಜ ಪರಿವರ್ತನೆಗೆ ಪೂರಕವಾಗಲಿದೆ ಎಂದು ರಾಜವಂಶಸ್ಥೆ ಲಲಿತಾರಾಣಿರಾಯಲು ಹೇಳಿದರು.
ನಗರದ ಕಸಾಪ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಕ್ರಿಯಾಶೀಲ ಲೇಖಕಿಯ ಸಂಘ ಮತ್ತು ಮಹಿಳಾ ಕವಿಗೋಷ್ಠಿ ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸಾಹಿತ್ಯ ಆಸಕ್ತಿ ಬೆಳೆಸಿಕೊಂಡರೇ ಸಮಾಜಮುಖಿ ಬರಹಗಳನ್ನು ನಿರೀಕ್ಷಿಸಲು ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು, ಪುರುಷ ಸಮಾನರಾಗಿ ಬೆಳೆಯುತ್ತಿದ್ದಾರೆ. ಮಹಿಳೆಯರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೇ ಸಾಮಾಜಿಕ ಬದಲಾವಣೆಯಾಗಲಿದೆ ಎಂದರು.
ಕೆಸಿಎಸ್ ಮಹಿಳಾ ಪದವಿ ಕಾಲೇಜಿ ಪ್ರಾಧ್ಯಾಪಕಿ ಡಾ ವಾಣಿಶ್ರೀ ಪಾಟೀಲ್ ಮಾತನಾಡಿ, ಕೆಲವರಿಗಷ್ಟೇ ಸೀಮಿತವಾದ ವೇದಿಕೆಗಳು ಪ್ರತಿಭಾವಂತ ಲೇಖಕಿಯರಿಗೆ ಅನ್ಯಾಯವಾಗುತ್ತಿದೆ. ಸಂಘಟನೆ ಅಸ್ತಿತ್ವಕ್ಕೆ ತರುವ ಮೂಲಕ ಪ್ರತಿಭಾವಂತರಿಗೆ ವೇದಿಕೆ ಒದಗಿಸಲಾಗುವುದು ಎಂದರು.
ಕವಿಗೋಷ್ಠಿಯಲ್ಲಿ 20ಕ್ಕೂ ಕವಯತ್ರಿಯರು ವಾಚಿಸಿದರು. ಪುನರ್ವಸತಿ ಕಾರ್ಯಕರ್ತೆ ವೀರಮ್ಮ, ಚುಸಾಪ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಸೇರಿ ವಿವಿಧ ಕ್ಷೇತ್ರದ ಸಾಧಕಿಯರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಎಸ್.ವಿ.ಪಾಟೀಲ್ ಗುಂಡೂರ, ನಿವೃತ್ತ ಪ್ರಾಚಾರ್ಯೆ ಪ್ರೊ.ಜಗದೇವಿ ಕಲಶೆಟ್ಟಿ, ಚುಸಾಪ ತಾಲೂಕಾಧ್ಯಕ್ಷ ಅಶೋಕಗುಡಿಕೋಟಿ, ಸಾಹಿತಿಗಳಾದ ಎನ್.ಶರಣಪ್ಪ ಮೆಟ್ರಿ, ಸಿ.ಮಹಾಲಕ್ಷ್ಮೀ ಕೇಸರಹಟ್ಟಿ, ಕಲಾವಿದ ವಿಷ್ಣುತೀರ್ಥ ಜೋಶಿ, ಶಿಕ್ಷಕರಾದ ಜಯಶ್ರೀ ಹಕ್ಕಂಡಿ, ಸುರೇಶ ಕಲಾಪ್ರಿಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net