ಒಗ್ಗಟ್ಟಿನಿಂದ ಸಮಾಜ ಬೆಳೆವಣಿಗೆ ಸಾಧ್ಯ

ಕನಕಗಿರಿಯ ಎಪಿಎಂಸಿ ಶ್ರಮಿಕರ ಭವನದಲ್ಲಿ ಏರ್ಪಡಿಸಿದ್ದ ಬಣಜಿಗ ಸಮಾಜದ 24ನೇ ಸಂಸ್ಥಾಪನಾ ದಿನಾಚರಣೆ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಸಮಾಜದ ಹಿರಿಯರು ಉದ್ಘಾಟಿಸಿದರು. ನಿಕಟಪೂರ್ವ ತಾಲೂಕಾಧ್ಯಕ್ಷ ಶರಣಪ್ಪ ಭತ್ತದ್, ಸಮಾಜದ ತಾಲೂಕಾಧ್ಯಕ್ಷ ಪ್ರಶಾಂತ ಪ್ರಭುಶೆಟ್ಟರ್, ಪ್ರಮುಖರಾದ ಸಂಗಪ್ಪ ಟೆಂಗಿನಕಾಯಿ, ರುದ್ರಮುನಿಯಪ್ಪ, ಗುರುಸಿದ್ದಪ್ಪ ಹಾದಿಮನಿ ಇತರರಿದ್ದರು.

Published on
ಕನಕಗಿರಿ: ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಸಮಾಜ ಸಂಘಟನೆಗೆ ಎಲ್ಲರೂ ಒಗ್ಗೂಡಬೇಕು ಎಂದು ಬಣಜಿಗ ಸಮಾಜದ ನಿಕಟಪೂರ್ವ ತಾಲೂಕಾಧ್ಯಕ್ಷ ಶರಣಪ್ಪ ಭತ್ತದ್ ಹೇಳಿದರು.
ಪಟ್ಟಣದ ಎಪಿಎಂಸಿ ಶ್ರಮಿಕರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಣಜಿಗ ಸಮಾಜದ 24ನೇ ಸಂಸ್ಥಾಪನಾ ದಿನಾಚರಣೆ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಣಜಿಗ ಸಮಾಜವು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಈ ನಿಟ್ಟಿನಲ್ಲಿ ಸಂಘಟನೆ ಹುಟ್ಟಿಕೊಂಡಿದ್ದು, 23 ವಸಂತಗಳನ್ನು ಪೂರೈಸಿದೆ. ಸಮಾಜ ಸಂಘಟನೆಯಾದ ಬಳಿಕ ಹೋರಾಟದ ಫಲವಾಗಿ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ 2ಎ ಪ್ರಮಾಣ ಪತ್ರ ದೊರೆತಿದ್ದು, ಹಲವು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಮೀಸಲಾತಿ ದೊರೆತಿದೆ. ಈಗ ಅವರು ನಗರ ಪ್ರದೇಶಗಳಲ್ಲಿ ಓದುತ್ತಿದ್ದಾರೆ. ಇನ್ನು ಉದ್ಯೋಗದಲ್ಲಿ 3ಎ ಪ್ರಮಾಣ ಪತ್ರ ದೊರೆತಿದ್ದು, ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ ಎಂದರು
.
ಸಮಾಜದ ವಿಚಾರ ಬಂದಾಗ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡಬೇಕು. ಆಗ ಮಾತ್ರ ನಾವುಗಳು ಸೌಲಭ್ಯ ಪಡೆಯಲು ಸಾಧ್ಯ. ಇನ್ನು 6 ವರ್ಷದ ಅಧಿಕಾರವಧಿಯಲ್ಲಿ ಜಾತಿ ಪ್ರಮಾಣ ಪತ್ರ ದೊರೆಯಲು ಶ್ರಮಿಸಿರುವುದಲ್ಲದೇ, ಸಮಾಜದ ಸಂಘಟನೆಗೆ ಒತ್ತು ನೀಡಲಾಗಿತ್ತು. ಇದೀಗ ಯುವ ಘಟಕ ರಚನೆ ಮಾಡಿರುವುದರಿಂದ ಸಂಘ ಮತ್ತಷ್ಟು ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಸಮಾಜದ ತಾಲೂಕಾಧ್ಯಕ್ಷ ಪ್ರಶಾಂತ ಪ್ರಭುಶೆಟ್ಟರ್, ಪ್ರಮುಖ ವಿರೂಪಾಕ್ಷಪ್ಪ ಭತ್ತದ್ ಮಾತನಾಡಿದರು. ಪಪಂ ಸದಸ್ಯ ಸುರೇಶ ಗುಗ್ಗಳಶೆಟ್ರ, ಪ್ರಮುಖರಾದ ಸಂಗಪ್ಪ ಟೆಂಗಿನಕಾಯಿ, ರುದ್ರಮುನಿಯಪ್ಪ, ಗುರುಸಿದ್ದಪ್ಪ ಹಾದಿಮನಿ, ಸಂತೋಷ ಹಾದಿಮನಿ, ಆನಂದ್ ಭತ್ತದ್, ಮಂಜುನಾಥ ಪ್ರಭುಶೆಟ್ಟರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net