ಜನತಾ ಸೇವಾ ಶಿಕ್ಷಣ ಸಂಸ್ಥೆ ಉದ್ದೇಶ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಭವಿಷ್ಯ ಕುರಿತು ಸಂಸ್ಥೆ ಅಧ್ಯಕ್ಷ ನರೇಶ ಮೂಥಾ ಮಾತನಾಡಿದರು. ಉಪಾಧ್ಯಕ್ಷ ಹಸನ್ ಮಹ್ಮದ್ ಸೊನ್ನೆಖಾನ್, ಪ್ರಮುಖರಾದ ಹರ್ಷವರ್ಧನ್, ಸಂತೋಷ ರಾಯ್ಕರ್, ಜೆಎಸ್‌ಡಬ್ಲುೃ ಸಂಪನ್ಮೂಲ ವ್ಯಕ್ತಿ ವಿಕಾಸ ಸೇರಿ ತರಬೇತಿ ಕೇಂದ್ರದ ತರಬೇತುದಾರರಿದ್ದರು. ಸಂದರ್ಶನದಲ್ಲಿ ವಿವಿಧ ಕೈಗಾರಿಕೆ ತರಬೇತಿ ಕೇಂದ್ರದ 90ಕ್ಕೂ ಹೆಚ್ಚು ಪದವೀಧರರು ಭಾಗವಹಿಸಿದ್ದು, 82 ಪದವೀಧರರನ್ನು ತರಬೇತಿಗೆ ಆಯ್ಕೆ ಮಾಡಲಾಯಿತು.