ಪ್ರತಿಭಟನಕಾರರ ಮೇಲೆ ಲಾಠಿಚಾರ್ಜ್​ ಖಂಡನಿಯ

ಜಂತರ್​ ಮಂತರ್​ನ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್​ ಅಸಾಂವಿಧಾನಿಕವಾಗಿದೆ ಎಂದು ಆಗ್ರಹಿಸಿ ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಎಐಡಿಎಸ್​ಒ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಮುಖಂಡರಾದ ಸಿಂಧು ಕೌದಿ ಮಾತನಾಡಿದರು. ವಿದ್ಯಾರ್ಥಿಗಳಾದ ಆನಂದ್​ ಗೌಡ, ಎಂ. ಡಿ ಶಾಹಿದ್​, ಯಮನೂರ್​, ನವಾಜ್​, ಸುಭ್ರಮಣ್ಯ, ಈರಣ್ಣ, ಮುತ್ತು, ಅಕಾಶ, ಪ್ರವಿಣ್​, ಸುನೀಲ್​, ಮಂಜುನಾಥ್​ ಇದ್ದರು.
ಜಂತರ್​ ಮಂತರ್​ನ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್​ ಅಸಾಂವಿಧಾನಿಕವಾಗಿದೆ ಎಂದು ಆಗ್ರಹಿಸಿ ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಎಐಡಿಎಸ್​ಒ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಮುಖಂಡರಾದ ಸಿಂಧು ಕೌದಿ ಮಾತನಾಡಿದರು. ವಿದ್ಯಾರ್ಥಿಗಳಾದ ಆನಂದ್​ ಗೌಡ, ಎಂ. ಡಿ ಶಾಹಿದ್​, ಯಮನೂರ್​, ನವಾಜ್​, ಸುಭ್ರಮಣ್ಯ, ಈರಣ್ಣ, ಮುತ್ತು, ಅಕಾಶ, ಪ್ರವಿಣ್​, ಸುನೀಲ್​, ಮಂಜುನಾಥ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಂಧು ಕೌದಿ ಕಳವಳ
  • ಎಐಡಿಎಸ್​ಒ ನೇತೃತ್ವದಲ್ಲಿ ಪ್ರತಿಭಟನೆ
ಕೊಪ್ಪಳ : ಯುಜಿಸಿ ನೀಟ್​ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧಮೇಂರ್ದ್ರ ಪ್ರಧಾನ್​ ರಾಜೀನಾಮೆಗೆ ಆಗ್ರಹಿಸಿ ಜಂತರ್​ ಮಂತರ್​ ನಿಂದ ಸಂಸತ್​ ಚಲೋ ಭಾಗವಾಗಿ ಸಂಸತ್ತಿನತ್ತ ತೆರಳುತ್ತಿದ್ದ ಜಂತರ್​ ಮಂತರ್​ನ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್​ ಮತ್ತು ಕೇಂದ್ರ ಸರ್ಕಾರದ ಅಪ್ರಜಾತಾಂತ್ರಿಕ, ಸರ್ವಾಧಿಕಾರಿ ಧೋರಣೆ ಅತ್ಯಂತ್ತ ಖಂಡನೀಯ ಎಂದು ಎಐಡಿಎಸ್​ಒ ರಾಜ್ಯ ಮುಖಂಡರಾದ ಸಿಂಧು ಕೌದಿ ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಪರೀಕ್ಷೆಯಲ್ಲಿನ ಅಕ್ರಮದ ಹೋಣೆ ಹೋತ್ತು ಕೇಂದ್ರ ಶಿಕ್ಷಣ ಸಚಿವ ಧಮೇಂರ್ದ್ರ ಪ್ರಧಾನ್​ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ದೇಶದ ಎಲ್ಲಾ ಶಿಕ್ಷಣ ಪ್ರೇಮಿಗಳು ತಮ್ಮ ಬೆಂಬಲ ಸೂಚಿಸಿದ್ದಾರೆ. ಪರೀಕ್ಷೆ ರದ್ದಾದ ನಂತರ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿದ್ದಾರೆ. ಈ ಕಾರಣಕ್ಕೆ ದೇಶದಲ್ಲಿ ನಡೆಯುತ್ತಿರುವ ಆಂದೋಲನದ ಭಾಗವಾಗಿ, ಪ್ರಖ್ಯಾತ ಪರಿಸರವಾದಿ ಸೋನಂ ವಾಂಗ್ಚುಕ್​ ದೆಹಲಿಯ ಜಂತರ್​ ಮಂತರ್​ನಲ್ಲಿ ಇತರ ಪ್ರತಿಭಟನಾಕಾರರೊಂದಿಗೆ ಅರ್ನಿದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು.
ಇತ್ತೀಚೆಗೆ ಸೋನಂ ವಾಂಗ್ಚುಕ್​ ಹಾಗೂ ಇತರ ಹೋರಾಟಗಾರರನ್ನು ಬಲವಂತವಾಗಿ ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಲಾಗಿದೆ. ಕೇಂದ್ರ ಸರ್ಕಾರವು ತಕ್ಷಣವೇ ಅವರೊಂದಿಗೆ ಮಾತುಕತೆ ಆರಂಭಿಸಬೇಕೆಂದು ಸೋಮವಾರ ಕರೆಯಲಾಗಿದ್ದ ಸಂಸತ್​ ಚಲೋ ಭಾಗವಾಗಿ ಸಂಸತ್ತಿನತ್ತ ತೆರಳುತ್ತಿದ್ದ ಜಂತರ್​ ಮಂತರ್​ನ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್​ ಅಸಾಂವಿಧಾನಿಕವಾಗಿದೆ. ಪ್ರತಿಭಟಕಾರರ ಮೇಲಿನ ಪೊಲೀಸ್​ ಕ್ರಮವು ಪ್ರಜಾಸತಾತ್ಮಕ ದೇಶದ ಆಶಯಗಳಿಗೆ ವಿರುದ್ಧವಾಗಿದೆ. ಪೊಲೀಸ್​ ಕ್ರಮ ಮತ್ತು ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿ ಧ್ವನಿ ಎತ್ತುವಂತೆ ಎಐಡಿಎಸ್​ಒ ದೇಶದ ಸಮಗ್ರ ವಿದ್ಯಾರ್ಥಿ ಸಮುದಾಯಕ್ಕೆ ಮನವಿ ಮಾಡುತ್ತದೆ ಎಂದರು.
ಯುವಜನ ಹೋರಾಟಗಾರ ಮಲಪ್ಪ, ಕಾಲೇಜಿನ ವಿದ್ಯಾರ್ಥಿಗಳಾದ ಆನಂದ್​ ಗೌಡ, ಎಂ. ಡಿ ಶಾಹಿದ್​, ಯಮನೂರ್​, ನವಾಜ್​, ಸುಭ್ರಮಣ್ಯ, ಈರಣ್ಣ, ಮುತ್ತು, ಅಕಾಶ, ಪ್ರವಿಣ್​, ಸುನೀಲ್​, ಮಂಜುನಾಥ್​, ಪರಶುರಾಮ್​, ಉಮಾರ್​ ಫಾರೂಕ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net