ಜಂತರ್ ಮಂತರ್ನ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್ ಅಸಾಂವಿಧಾನಿಕವಾಗಿದೆ ಎಂದು ಆಗ್ರಹಿಸಿ ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಎಐಡಿಎಸ್ಒ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಮುಖಂಡರಾದ ಸಿಂಧು ಕೌದಿ ಮಾತನಾಡಿದರು. ವಿದ್ಯಾರ್ಥಿಗಳಾದ ಆನಂದ್ ಗೌಡ, ಎಂ. ಡಿ ಶಾಹಿದ್, ಯಮನೂರ್, ನವಾಜ್, ಸುಭ್ರಮಣ್ಯ, ಈರಣ್ಣ, ಮುತ್ತು, ಅಕಾಶ, ಪ್ರವಿಣ್, ಸುನೀಲ್, ಮಂಜುನಾಥ್ ಇದ್ದರು.
ಕೊಪ್ಪಳ : ಯುಜಿಸಿ ನೀಟ್ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧಮೇಂರ್ದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ನಿಂದ ಸಂಸತ್ ಚಲೋ ಭಾಗವಾಗಿ ಸಂಸತ್ತಿನತ್ತ ತೆರಳುತ್ತಿದ್ದ ಜಂತರ್ ಮಂತರ್ನ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್ ಮತ್ತು ಕೇಂದ್ರ ಸರ್ಕಾರದ ಅಪ್ರಜಾತಾಂತ್ರಿಕ, ಸರ್ವಾಧಿಕಾರಿ ಧೋರಣೆ ಅತ್ಯಂತ್ತ ಖಂಡನೀಯ ಎಂದು ಎಐಡಿಎಸ್ಒ ರಾಜ್ಯ ಮುಖಂಡರಾದ ಸಿಂಧು ಕೌದಿ ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಪರೀೆಯಲ್ಲಿನ ಅಕ್ರಮದ ಹೋಣೆ ಹೋತ್ತು ಕೇಂದ್ರ ಶಿಕ್ಷಣ ಸಚಿವ ಧಮೇಂರ್ದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ದೇಶದ ಎಲ್ಲಾ ಶಿಕ್ಷಣ ಪ್ರೇಮಿಗಳು ತಮ್ಮ ಬೆಂಬಲ ಸೂಚಿಸಿದ್ದಾರೆ. ಪರೀಕ್ಷೆ ರದ್ದಾದ ನಂತರ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿದ್ದಾರೆ. ಈ ಕಾರಣಕ್ಕೆ ದೇಶದಲ್ಲಿ ನಡೆಯುತ್ತಿರುವ ಆಂದೋಲನದ ಭಾಗವಾಗಿ, ಪ್ರಖ್ಯಾತ ಪರಿಸರವಾದಿ ಸೋನಂ ವಾಂಗ್ಚುಕ್ ದೆಹಲಿಯ ಜಂತರ್ ಮಂತರ್ನಲ್ಲಿ ಇತರ ಪ್ರತಿಭಟನಾಕಾರರೊಂದಿಗೆ ಅರ್ನಿದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು.
ಇತ್ತೀಚೆಗೆ ಸೋನಂ ವಾಂಗ್ಚುಕ್ ಹಾಗೂ ಇತರ ಹೋರಾಟಗಾರರನ್ನು ಬಲವಂತವಾಗಿ ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಲಾಗಿದೆ. ಕೇಂದ್ರ ಸರ್ಕಾರವು ತಕ್ಷಣವೇ ಅವರೊಂದಿಗೆ ಮಾತುಕತೆ ಆರಂಭಿಸಬೇಕೆಂದು ಸೋಮವಾರ ಕರೆಯಲಾಗಿದ್ದ ಸಂಸತ್ ಚಲೋ ಭಾಗವಾಗಿ ಸಂಸತ್ತಿನತ್ತ ತೆರಳುತ್ತಿದ್ದ ಜಂತರ್ ಮಂತರ್ನ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್ ಅಸಾಂವಿಧಾನಿಕವಾಗಿದೆ. ಪ್ರತಿಭಟಕಾರರ ಮೇಲಿನ ಪೊಲೀಸ್ ಕ್ರಮವು ಪ್ರಜಾಸತಾತ್ಮಕ ದೇಶದ ಆಶಯಗಳಿಗೆ ವಿರುದ್ಧವಾಗಿದೆ. ಪೊಲೀಸ್ ಕ್ರಮ ಮತ್ತು ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿ ಧ್ವನಿ ಎತ್ತುವಂತೆ ಎಐಡಿಎಸ್ಒ ದೇಶದ ಸಮಗ್ರ ವಿದ್ಯಾರ್ಥಿ ಸಮುದಾಯಕ್ಕೆ ಮನವಿ ಮಾಡುತ್ತದೆ ಎಂದರು.
ಯುವಜನ ಹೋರಾಟಗಾರ ಮಲಪ್ಪ, ಕಾಲೇಜಿನ ವಿದ್ಯಾರ್ಥಿಗಳಾದ ಆನಂದ್ ಗೌಡ, ಎಂ. ಡಿ ಶಾಹಿದ್, ಯಮನೂರ್, ನವಾಜ್, ಸುಭ್ರಮಣ್ಯ, ಈರಣ್ಣ, ಮುತ್ತು, ಅಕಾಶ, ಪ್ರವಿಣ್, ಸುನೀಲ್, ಮಂಜುನಾಥ್, ಪರಶುರಾಮ್, ಉಮಾರ್ ಫಾರೂಕ್ ಇತರರಿದ್ದರು.