ವಿಮೆ ಆ್ಯಪ್ ಸರಳೀಕರಣಗೊಳಿಸಿ

ಗ್ರಾಹಕರಿಗೆ ಮಾಹಿತಿ ಒದಗಿಸುವ ವಿಮೆ ಯೋಜನೆ ಆ್ಯಪ್ ಬಳಕೆಯನ್ನು ಸರಳೀಕರಣಗೊಳಿಸಲು ಒತ್ತಾಯಿಸಿ ಎಲ್‌ಐಸಿ ಪ್ರತಿನಿಧಿಗಳ ಸಂಘದ ತಾಲೂಕು ಘಟಕದ ಸದಸ್ಯರು ಗಂಗಾವತಿ ಎಲ್‌ಐಸಿ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು. ವಿಭಾಗೀಯ ಖಜಾಂಚಿ ವಲಿಮೋಹಿಯುದ್ದಿನ್, ತಾಲೂಕಾಧ್ಯಕ್ಷ ಕೆ.ಎಂ.ಮಂಜುನಾಥ ಪದಾಧಿಕಾರಿಗಳಾದ ಹುಸೇನ್‌ಬಾಷಾ ಜಾಲಹಳ್ಳಿ, ಕೆ.ನಿಂಗಜ್ಜ, ಎಂ.ನಿರುಪಾದಿ ಬೆಣಕಲ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಎಲ್‌ಐಸಿ ಪ್ರತಿನಿಧಿಗಳ ತಾಲೂಕು ಸಂಘ ಆಗ್ರಹ
  • ಗಂಗಾವತಿ ಶಾಖಾ ವ್ಯವಸ್ಥಾಪಕರಿಗೆ ಮನವಿ
ಗಂಗಾವತಿ: ಗ್ರಾಹಕರಿಗೆ ಮಾಹಿತಿ ಒದಗಿಸುವ ವಿಮೆ ಯೋಜನೆ ಆ್ಯಪ್ ಬಳಕೆಯನ್ನು ಸರಳೀಕರಣಗೊಳಿಸುವಂತೆ ಒತ್ತಾಯಿಸಿ ಎಲ್‌ಐಸಿ ಪ್ರತಿನಿಧಿಗಳ ಸಂಘದ ತಾಲೂಕು ಘಟಕದ ಸದಸ್ಯರು ನಗರದ ಎಲ್‌ಐಸಿ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ, ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಗ್ರಾಹಕರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಡಿಜಿಟಲೀಕರಣವಾಗಿದ್ದು, ಆದರೆ ಕೆಲ ಆ್ಯಪ್‌ಗಳು ಗೊಂದಲದಿಂದ ಕೂಡಿದ್ದರಿಂದ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ. ಕಂತು ಪಾವತಿ, ಸಾಲ ಸೌಲಭ್ಯ ಮತ್ತು ಮ್ಯಾಚ್ಯುರಿಟಿ ಸೇರಿ ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಯಲು ಆ್ಯಪ್‌ಗಳನ್ನು ಸರಳೀಕರಣಗೊಳಿಸುವ ಅಗತ್ಯವಿದೆ. ಖಾಸಗಿ ಕಂಪನಿಗಳು ಗ್ರಾಹಕರಿಗೆ ಮಾಹಿತಿ ಒದಗಿಸುವ ವ್ಯವಸ್ಥೆ ಮಾಡಿದ್ದರಿಂದ ಕಳೆದೆರಡು ತಿಂಗಳಿಂದ ಎಲ್‌ಐಸಿ ಆ್ಯಪ್‌ಗಳು ಸಮರ್ಪಕ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಡಿಜಿಟಲೀಕರಣ ವ್ಯವಸ್ಥೆ ಸರಿಪಡಿಸುವಂತೆ ಸಂಘದ ಸದಸ್ಯರು ಒತ್ತಾಯಿಸಿದರು.
ವಿಭಾಗೀಯ ಖಜಾಂಚಿ ವಲಿಮೋಹಿಯುದ್ದಿನ್, ತಾಲೂಕಾಧ್ಯಕ್ಷ ಕೆ.ಎಂ.ಮಂಜುನಾಥ ಪದಾಧಿಕಾರಿಗಳಾದ ಹುಸೇನ್‌ಬಾಷಾ ಜಾಲಹಳ್ಳಿ, ಕೆ.ನಿಂಗಜ್ಜ, ಎಂ.ನಿರುಪಾದಿ ಬೆಣಕಲ್, ಕೆ.ಎಚ್.ಈಶ್ವರ, ಶಂಕ್ರಪ್ಪ ಗೆದ್ದಿಕೇರಿ, ರಾಘವೇಂದ್ರ ದೇಸಾಯಿ, ಆಂಜಿನಪ್ಪ ಕರಿಗೌಡ, ಪಂಪಣ್ಣ ಪಟ್ಟಣಶೆಟ್ಟಿ, ವೀರನಗೌಡ, ಬಸವರಾಜ ಸಜ್ಜನ್, ಭಾರತಿ ಆಗಲೂರು, ಕೆ.ವರಲಕ್ಷ್ಮೀ, ಖಾಜಾವಲಿ, ಶ್ರೀನಿವಾಸ ಕುಲಕರ್ಣಿ, ದುರ್ಗಾಪ್ರಸಾದ, ಸಿದ್ದಾಪೂರ ರಾಘವೇಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net