ಕಾರ್ಖಾನೆಗಳ ವಿರುದ್ಧ ಸಹಿ ಸಂಗ್ರಹ

ಬಿಎಸ್​ಪಿಎಲ್​ ಸೇರಿ ಇನ್ನಿತರ ಕಾರ್ಖಾನೆಗಳ ವಿಸ್ತರಣೆ ಖಂಡಿಸಿ ಜಂಟಿ ಕ್ರಿಯಾ ಸಮಿತಿ ಕೊಪ್ಪಳದಲ್ಲಿ ಶನಿವಾರ ಸಹಿ ಸಂಗ್ರಹ
ಬಿಎಸ್​ಪಿಎಲ್​ ಸೇರಿ ಇನ್ನಿತರ ಕಾರ್ಖಾನೆಗಳ ವಿಸ್ತರಣೆ ಖಂಡಿಸಿ ಜಂಟಿ ಕ್ರಿಯಾ ಸಮಿತಿ ಕೊಪ್ಪಳದಲ್ಲಿ ಶನಿವಾರ ಸಹಿ ಸಂಗ್ರಹ
Published on
ಕೊಪ್ಪಳ: ಬಿಎಸ್​ಪಿಎಲ್​ ಸೇರಿ ಇನ್ನಿತರ ಕಾರ್ಖಾನೆಗಳ ವಿಸ್ತರಣೆ ಖಂಡಿಸಿ ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿರುವ ಅರ್ನಿದಿಷ್ಟಾವಧಿ ದರಣಿಯಲ್ಲಿ ಶನಿವಾರ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ವಾಣಿಜ್ಯೋದ್ಯಮಿ ಬಸವರಾಜ ಬಳ್ಳೊಳ್ಳಿ ಚಾಲನೆ ನೀಡಿ ಮಾತನಾಡಿ, ಕೊಪ್ಪಳ ಹಾಗೂ ಸುತ್ತಲಿನ ಹಳ್ಳಿಗಳಿಗೆ ಕಾರ್ಖಾನೆಗಳ ವಿಷಾನಿಲ ಹರಡುತ್ತಿದೆ. ಪರಿಸರ ಮಲೀನವಾಗುತ್ತಿದೆ. ಕಣ್ಣಿಗೆ ಕಾಣುವ ಧೂಳು, ದೇಹದ ಒಳಗೆ ಎಷ್ಟು ಹಾನಿ ಮಾಡುತ್ತದೆ ಎಂಬುದು ಊಹೆಗೂ ಸಿಗದು. ರೋಗ ಬಂದ ನಂತರ ಎಚ್ಚರಗೊಳ್ಳುವ ಬದಲು ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಶರಣಬಸವ ಬೆಟ್ಟದೂರು ಮಾತನಾಡಿ, ನಾನು ಕೊಪ್ಪಳದಲ್ಲೇ ಶಿಕ್ಷಣ ಪೂರ್ಣಗೊಳಿಸಿರುವೆ. ಆಗಿನ ವಾತಾವರಣ ಈಗ ಇಲ್ಲ. ಕಾರ್ಖಾನೆಗಳಿಗೆ ನಿಯಮ ಮೀತಿ ತುಂಗಭದ್ರಾ ನೀರು ಬಳಕೆಯಾಗುತ್ತಿದೆ. ಇದರಿಂದ ನಾವೂ ಬಾಧಿತರಾಗಿದ್ದೇವೆ. ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗಲಿ ಎಂದರು.
ಗವಿಸಿದ್ದಪ್ಪ ಮುದಗಲ್​, ಪರಮೇಶ್ವರಪ್ಪ ಕೊಪ್ಪಳ ಮಾತನಾಡಿದರು. ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಬಿ.ಜಿ. ಕರಿಗಾರ, ರವಿ ಕಾಂತನವರ, ಎಸ್​.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ಮಲ್ಲಿಕಾರ್ಜುನ ಬಿ. ಗೋನಾಳ, ಸುಭಾನ್​ ನೀರಲಗಿ, ಮಂಜುನಾಥ ಕವಲೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net