ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತವೇ ಅಹಿಂದ. ಅದು ಸಿದ್ದರಾಮಯ್ಯನಿಗೆ ಗೊತ್ತಿಲ್ಲ. ತನ್ನಿಂದಲೇ ಎಲ್ಲ ಅಂದುಕೊಂಡಿದ್ದಾರೆ. ಮುಸ್ಲಿಮರು ಕಾಂಗ್ರೆಸ್ನ ಮತದಾರರು. ಉಪ ಚುನಾವಣೆಯಲ್ಲಿ ಆವರ್ಗದ ಮತದಾರರು ಕಾಂಗ್ರೆಸ್ನಿಂದ ವಿಮುಖ ಆಗುವಂತೆ ಮಾಡಿದರು. ನಾನಿದ್ದರೆ ಮಾತ್ರ ಕಾಂಗ್ರೆಸ್, ಇಲ್ಲದಿದ್ದರೆ ಅಧಿಕಾರದಲ್ಲಿರಬಾರದು ಎನ್ನುತ್ತಾರೆ. ಬಿಜೆಪಿ&ಜೆಡಿಎಸ್ಮೈತ್ರಿ ಮಾಡಿಕೊಂಡಿಲ್ಲ. ಬದಲಿಗೆ ಕಾಂಗ್ರೆಸ್&ಬಿಜೆಪಿ ಮೈತ್ರಿ ಇದೆ. ಬಿ.ವೈ.ವಿಜಯೇಂದ್ರ, ಪ್ರಹ್ಲಾದ್ ಜೋಶಿ ಗೆಲ್ಲಲು ಕಾಂಗ್ರೆಸ್ ನೆರವು ನೀಡಿತು ಎಂದು ಆರೋಪಿಸಿದರು.