ಶುಕಮುನಿಸ್ವಾಮಿ ಜಾತ್ರೆ ಜೋರು

ಯಲಬುರ್ಗಾ ತಾಲೂಕಿನ ಯಾಪಲದಿನ್ನಿ ಗ್ರಾಮದ ಅವಧೂತ ಶುಕಮುನಿ ಸ್ವಾಮಿ ಜಾತ್ರಾಮಹೋತ್ಸವ ನಿಮಿತ್ತ ರಥೋತ್ಸವ ಜರುಗಿತು.
ಯಲಬುರ್ಗಾ ತಾಲೂಕಿನ ಯಾಪಲದಿನ್ನಿ ಗ್ರಾಮದ ಅವಧೂತ ಶುಕಮುನಿ ಸ್ವಾಮಿ ಜಾತ್ರಾಮಹೋತ್ಸವ ನಿಮಿತ್ತ ರಥೋತ್ಸವ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ರಥೋತ್ಸವಕ್ಕೆ
  • ಹೂವಿನ ಹಾರ
  • ಜಾತ್ರಾ ಮಹೋತ್ಸವ
ಯಲಬುರ್ಗಾ: ತಾಲೂಕಿನ ಯಾಪಲದಿನ್ನಿ ಗ್ರಾಮದ ಅವಧೂತ ಶುಕಮುನಿ ಸ್ವಾಮಿ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ರಥೋತ್ಸವ ಶ್ರದ್ಧೆ, ಭಕ್ತಿಯಿಂದ ಜರುಗಿತು.
ಶುಕಮುನಿ ಮುತ್ಯಾನ ಜಾತ್ರೆಗೆ ತರಲಕಟ್ಟಿ ಗ್ರಾಮದಿಂದ ರಥೋತ್ಸವಕ್ಕೆ ಹೂವಿನ ಹಾರ ಹಾಗೂ ಹಗ್ಗ ತರಲಾಯಿತು. ನಿಲೋಗಲ್ ಗ್ರಾಮದಿಂದ ರಥೋತ್ಸವದ ಕಲಶ ಹಾಗೂ ಬುಡಕುಂಟಿ ಗ್ರಾಮಸ್ಥರಿಂದ ಹೂವಿನಹಾರ ತರಲಾಯಿತು.
ನಿಡಶೇಸಿ ಅಭಿನವ ಕರಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಬಾಜಾ ಭಜಂತ್ರಿ ಮೇಳ ಡೊಳ್ಳು ಕುಣಿತ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ರಥೋತ್ಸವ ಸಾಗಿತು. ನಾನಾ ಗ್ರಾಮಗಳ ಭಕ್ತರು ಆಗಮಿಸಿದ್ದರು. ಸಂಜೆ ಮದ್ದು ಸುಡುವ ಕಾರ್ಯಕ್ರಮ ನಡೆಯಿತು. ಶುಖಮುನಿ ಯುವಕಲಾ ನಾಟ್ಯಸಂಘದಿಂದ ‘ದಿಲ್ಲಿ ಹೊಕ್ಕ ಪುಂಡ ಹುಲಿ ಅರ್ಥಾತ್ ಕೆರಳಿದ ಕರ್ಣಾರ್ಜುನ’ ನಾಟಕ ಪ್ರದರ್ಶನ ಗೊಂಡಿತು.
ಬೆಳಗ್ಗೆ ಶುಕಮುನಿ ದೇವಸ್ಥಾನದಲ್ಲಿ ಶುಕಮುನಿಸ್ವಾಮಿ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಹೋಮ, ವಿಶೇಷ ಪೂಜೆ ಇತರ ಧಾರ್ಮಿಕ ಕಾರ್ಯಕ್ರಮಗಳ ನಂತರ 5 ಜೋಡಿ ಸಾಮೂಹಿಕ ವಿವಾಹ ಜರುಗಿತು. ಕುದರಿಮೋತಿಯ ವಿಜಯ ಮಾಹಾಂತ ಸ್ವಾಮೀಜಿ, ಶ್ರೀಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಶಿವನಾಗಯ್ಯ ಹಿರೇಮಠ, ಕಳಕಯ್ಯ ಹಿರೇಮಠ, ರವಿಹಿರೇಮಠ, ಬಸಯ್ಯ ಹಿರೇಮಠ ಶರಣಯ್ಯ ಹಿರೇಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net