ಶ್ರೀ ಕನಕಾಚಲ ಭಜನಾ ತಂಡದಿಂದ ತಾರತಮ್ಯ ಭಜನೆ ಹಾಗೂ ವಿವಿಧ ವಾದ್ಯಮೇಳ ಆರಾಧನೆಗೆ ಮೆರುಗು ತಂದವು. ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಶ್ರೀಗುರು ಶ್ರೀಶ ವಿಠ್ಠಲ ಪ್ರತಿಷ್ಠಾನ ಪದಾಧಿಕಾರಿಗಳಾದ ಭೀಮಸೇನ ಜೋಶಿ, ಟಿ.ವೆಂಕಟೇಶ್ ಕುಲಕರ್ಣಿ, ಗುರುರಾಜ ಕುಲಕರ್ಣಿ ಕನ್ನೇರ ಮಡುವು, ಗೋಪಾಲ ಕೃಷ್ಣ ಕುಲಕರ್ಣಿ, ಎಂ.ಭೀಮರಾವ್ ಕುಲಕರ್ಣಿ, ಗುರುರಾಜ್ ಕುಲಕರ್ಣಿ, ಎಂ.ಪ್ರಲ್ಲಾದರಾವ್, ರಾಘವೇಂದ್ರ ಕರಡಿಗುಡ್ಡ, ಗುನ್ನಾಳ ಪ್ರಲ್ಲಾದರಾವ್ ಇದ್ದರು.