ಹಳ್ಳಿ-ಹಳ್ಳೀಲು ನರಸಿಂಹ ದೇವರ ಆರಾಧನೆ

ಕನಕಗಿರಿ ತಾಲೂಕಿನ ನವಲಿಯ ಭೋಗಾಪುರೇಶ ದೇವಸ್ಥಾನದಲ್ಲಿ ನರಸಿಂಹ ಜಯಂತಿ ನಿಮಿತ್ತ ಭಜನೆಯೊಂದಿಗೆ ಭಾವಚಿತ್ರ ಮೆರವಣಿಗೆ ನಡೆಯಿತು. ಪ್ರಮುಖರಾದ ಪಂಪಣ್ಣ ತುಪ್ಪದ, ಸುರೇಶರೆಡ್ಡಿ ಮಹಲಿನಮನೆ, ಬಸವರಾಜ ಗುಗ್ಗಳಶೆಟ್ರ ಇತರರಿದ್ದರು.
ಕನಕಗಿರಿ ತಾಲೂಕಿನ ನವಲಿಯ ಭೋಗಾಪುರೇಶ ದೇವಸ್ಥಾನದಲ್ಲಿ ನರಸಿಂಹ ಜಯಂತಿ ನಿಮಿತ್ತ ಭಜನೆಯೊಂದಿಗೆ ಭಾವಚಿತ್ರ ಮೆರವಣಿಗೆ ನಡೆಯಿತು. ಪ್ರಮುಖರಾದ ಪಂಪಣ್ಣ ತುಪ್ಪದ, ಸುರೇಶರೆಡ್ಡಿ ಮಹಲಿನಮನೆ, ಬಸವರಾಜ ಗುಗ್ಗಳಶೆಟ್ರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಪವನಕುಮಾರ ಗುಂಡೂರು ಅನಿಸಿಕೆ
ಕನಕಗಿರಿ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಭೋಗಾಪುರೇಶ ದೇವಸ್ಥಾನದಲ್ಲಿ ಶ್ರೀ ನರಸಿಂಹ ಜಯಂತಿ ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಈ ನಿಮಿತ್ತ ವಿಶೇಷ ಪೂಜೆ, ನರಸಿಂಹ ದೇವರ ಭಾವಚಿತ್ರ ಹಾಗೂ ಗ್ರಂಥಗಳ ಮೆರವಣಿಗೆ ಸಂಭ್ರಮದಿಂದ ನಡೆಯಿತು.
ಕನಕಗಿರಿ ಶ್ರೀ ರಾಘವೇಂದ್ರಸ್ವಾಮಿ ಭಜನಾ ಮಂಡಳಿಯವರು ನರಸಿಂಹ ದೇವರ ಹಾಡುಗಳನ್ನಾಡಿ ಭಕ್ತಿ, ಭಾವ ಮೆರೆದರು. ಬ್ರಾಹ್ಮಣ ಸಮಾಜದ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಶೋಭೆ ತಂದರು.
ಸಾಹಿತಿ ಪವನಕುಮಾರ ಗುಂಡೂರು ಮಾತನಾಡಿ, ನರಸಿಂಹ ದೇವರು ವಿಷ್ಣು, ರಾಮ ಸೇರಿ ನಾನಾ ಅವತಾರಗಳಲ್ಲಿ ಕೇಂದ್ರಿಕೃತವಾಗಿದ್ದಾನೆ. ಉಗ್ರ ರೂಪಿಯಾಗಿರುವ ನರಸಿಂಹ ದೇವರು ದುಷ್ಟರ ಸಂಹಾರಕ್ಕೆ ಅವತಾರವೆತ್ತಿ ಭಕ್ತರ ಇಷ್ಟಾರ್ಥ ಪೂರೈಸಿರುವ ಸಂಗತಿ ಕಥೆ, ಪುರಾಣಗಳಲ್ಲಿ ಕಂಡಿದ್ದೇವೆ. ಭಾರತೀಯ ಸಂಪ್ರದಾಯದಂತೆ ಉಗ್ರರೂಪಿ ನರಸಿಂಹ ದೇವರ ಆರಾಧಕರು ಪ್ರತಿ ಹಳ್ಳಿ-ಹಳ್ಳಿಯಲ್ಲೂ ಇದ್ದು, ಅವರ ಆರಾಧನೆ ಜಯಂತಿ ದಿನವಲ್ಲದೇ ನಿತ್ಯವೂ ಆಗುತ್ತಿದೆ ಎಂದರು.
ಬಳ್ಳಾರಿಯ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ಗುರುರಾಜ ಸವದಿ ಕುಟುಂಬದಿಂದ ತೀರ್ಥ, ಪ್ರಸಾದ, ಶ್ರೀಸ್ವಾಮಿಗೆ ಪೂಜೆ, ಅಭಿಷೇಕ, ವಿಶೇಷ ಅಲಂಕಾರ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಜಗನ್ನಾಥ ದೇಶಪಾಂಡೆ, ಶ್ರೀನಿವಾಸ ದೇಶಪಾಂಡೆ, ಗುರುರಾಜ ದೇಶಪಾಂಡೆ, ಪ್ರದೀಪ ಸವದಿ, ಬಂಡೆರಾವ್, ನಾರಾಯಣ ಕುಲಕರ್ಣಿ, ಪುರುಷೋತ್ತಮಾಚಾರ್, ಶ್ರೀನಾಥ ಆಚಾರ್ ನವಲಿ, ಹಾರ್ಮೋನಿಯಂ ವಾದಕ ಪರಂದರಾಮರೆಡ್ಡಿ, ಕಲಾವಿದರಾದ ಸೂರ್ಯ ನಾರಾಯಣರೆಡ್ಡಿ, ಶಿವಪ್ಪ ಅಂಕಸದೊಡ್ಡಿ, ಪಂಪಾಪತಿ ತುಪ್ಪದ, ಭೀಮರೆಡ್ಡಿ ಓಣಿಮನಿ, ಭೀಮರಾವ್, ಈರಣ್ಣ ಶ್ರೇಷ್ಠಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net