ಕನಕಗಿರಿ: ಪಟ್ಟಣದ ಗೋರಾಳಕೇರಿ ಶ್ರೀ ದುರ್ಗಾದೇವಿ ಹಾಗೂ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀ ದುರ್ಗಾದೇವಿ ಉಚ್ಛಾಯ ಅದ್ದೂರಿಯಾಗಿ ಜರುಗಿತು.
ಕಳೆದ ಸೋಮವಾರದಿಂದ ಜಾತ್ರೆ ಆರಂಭಗೊಂಡಿದ್ದು, ಈ ನಿಮಿತ್ತ ನಿತ್ಯ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಕೊನೆಯ ದಿನ ಅಂಗವಾಗಿ ಪಟ್ಟಣದ ಭಕ್ತರು ಎರಡೂ ದೇವಸ್ಥಾನಗಳಿಗೆ ತೆರಳಿ ಹೋಳಿಗೆ ನೈವೇದ್ಯ ಅರ್ಪಿಸಿದರು. ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು.
ಸಂಜೆ ಗೋರಾಳಕೇರಿ ದುರ್ಗಾದೇವಿ ದೇವಸ್ಥಾನದಿಂದ ಪಾದಗಟ್ಟೆವರೆಗೆ ಉಚ್ಛಾಯ ಸಾಗಿ ಸ್ವಸ್ಥಾನ ಸಲುಪಿತು. ನೆರೆದಿದ್ದ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ದೇವಿಗೆ ಜೈಕಾರ ಹಾಕಿ ಭಕ್ತಿ ಮೆರೆದರು.