ಕಲೆ-ಸಾಹಿತ್ಯದತ್ತ ಒಲವು ತೋರಿಸಿ

ಕೊಪ್ಪಳದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಜಯಂತಿ ಅಂಗವಾಗಿ ಆಯೋಜಿಸಿದ ಗುರುನಮನ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ನಿವೃತ್ತ ಲೋಕಾಯುಕ್ತ ಅಧಿಕಾರಿ ರಾಮಣ್ಣ ಬನ್ನಿಗೋಳ ಉದ್ಘಾಟಿಸಿದರು.ಪ್ರಮುಖರಾದ ಕರ್ಣ ಕುವಾರ್, ಮಹಾಂತಯ್ಯ ಶಾಸಿ ಹಿರೇಮಠ, ತೋಟಪ್ಪ ಕಾಮನೂರು, ಪ್ರಮೋದ ಕುಲಕರ್ಣಿ, ಮಲ್ಲಿಕಾರ್ಜುನ ಕೋಣಿ ಇತರರಿದ್ದರು.
ಕೊಪ್ಪಳದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಜಯಂತಿ ಅಂಗವಾಗಿ ಆಯೋಜಿಸಿದ ಗುರುನಮನ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ನಿವೃತ್ತ ಲೋಕಾಯುಕ್ತ ಅಧಿಕಾರಿ ರಾಮಣ್ಣ ಬನ್ನಿಗೋಳ ಉದ್ಘಾಟಿಸಿದರು.ಪ್ರಮುಖರಾದ ಕರ್ಣ ಕುವಾರ್, ಮಹಾಂತಯ್ಯ ಶಾಸಿ ಹಿರೇಮಠ, ತೋಟಪ್ಪ ಕಾಮನೂರು, ಪ್ರಮೋದ ಕುಲಕರ್ಣಿ, ಮಲ್ಲಿಕಾರ್ಜುನ ಕೋಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಂಡಿತ
  • ಪುಟ್ಟರಾಜ
  • ಗವಾಯಿ
ಕೊಪ್ಪಳ: ಜನ ಸದಾಕಾಲ ಟಿ.ವಿ, ಮೊಬೈಲ್ ನೋಡುತ್ತ ಕುಳಿತುಕೊಳ್ಳುವ ಬದಲು. ಕಲೆ, ಸಾಹಿತ್ಯ, ಸಂಗೀತದಂತಹ ಅಭಿರುಚಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಕಲಾವಿದರಿಗೂ ಪ್ರೋತ್ಸಾಹ ಲಭಿಸುತ್ತದೆ ಎಂದು ನಿವೃತ್ತ ಲೋಕಾಯುಕ್ತ ಅಧಿಕಾರಿ ರಾಮಣ್ಣ ಬನ್ನಿಗೋಳ ಹೇಳಿದರು.
ತಾಲೂಕಿನ ಹಿರೇಬಗನಾಳಪಂಡಿತ್ ಪುಟ್ಟರಾಜ ಹರಿಕಥಾ ಸಾಂಸ್ಕೃತಿಕ ಕಲಾ ಸಂಸ್ಥೆಯಿಂದ ನಗರದಲ್ಲಿ ಇತ್ತೀಚೆಗೆ ಪಂಡಿತ ಪುಟ್ಟರಾಜ ಗವಾಯಿಗಳ ಜಯಂತಿ ಅಂಗವಾಗಿ ಆಯೋಜಿಸಿದ ಗುರುನಮನ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ವಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಕರ್ಣಕುವಾರ್ ವಾತನಾಡಿ, ಕಲಾ ಸಂಗಳು ಸಾಂಸ್ಕೃತಿಕ ಪೋಷಕರಾಗಿ ಕೆಲಸ ವಾಡುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನಾವೆಲ್ಲ ಕಳೆದು ಹೋಗಿದ್ದೇವೆ. ಜನರಿಗೆ ಡಿಸ್ಕೋ ಡ್ಯಾನ್ಸ್‌ಗಳ ಬಗ್ಗೆ ಇರುವ ಪ್ರೀತಿ ಸಂಗೀತ ಕಾರ್ಯಕ್ರಮಗಳ ಬಗ್ಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗಾಣಿಗ ಸವಾಜದ ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರು, ಪ್ರಮುಖರಾದ ಪ್ರಮೋದ ಕುಲಕರ್ಣಿ, ಮಲ್ಲಿಕಾರ್ಜುನ ಕೋಣಿ, ಯಮನೂರಪ್ಪ ಬಿ., ಚನ್ನಯ್ಯ ರ‌್ಯಾವಣಕಿ, ಕೃಷ್ಣ ಸೊರಟೂರು ಇತರರಿದ್ದರು.
===
ಸಾಧಕರಿಗೆ ಸನ್ಮಾನ
ಪತ್ರಿಕೋದ್ಯಮದಲ್ಲಿ ಸಾಧನೆಗಾಗಿ ರವೀಂದ್ರ ರೆಡ್ಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗವಿಸಿದ್ಧಯ್ಯ ಎಸ್. ಲಿಂಗಬಸಯ್ಯನಮಠ, ಸುಗಮ ಸಂಗೀತ ಕ್ಷೇತ್ರದಲ್ಲಿ ಶ್ರೀಶೈಲ ಚಿಕ್ಕಮಠ ಕುದರಿ ಸಾಲವಾಡಗಿ, ಸಂಗೀತಾ ಕ್ಷೇತ್ರದಲ್ಲಿ ಶಕುಂತಲಾ ಬೆನ್ನಾಳ, ಶಿಕ್ಷಣ ಕ್ಷೇತ್ರದಲ್ಲಿ ಈಶ್ವರಯ್ಯ ಬ. ಹಲಸಿನಮರದ, ಕಂಪ್ಯೂಟರ್ ಕ್ಷೇತ್ರದಲ್ಲಿ ರೇವಣಸಿದ್ದಸಾ ಸೋ ಶಿದ್ಲಿಂಗ ಅವರನ್ನು ಸನ್ಮಾನಿಸಲಾಯಿತು.
"

ಜಗತ್ತಿನ ಎಲ್ಲ ನೋವುಗಳನ್ನೂ ಎದುರಿಸುವ ಶಕ್ತಿ ಸಂಗೀತ ನೀಡುತ್ತದೆ. ಜನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರೆ ಕಲಾವಿದರಿಗೆ ಪ್ರೇರಣೆ ಲಭಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net