ಶಿವಚಿದಂಬರೇಶ್ವರ ರಥೋತ್ಸವ ಸಂಪನ್ನ

ಕೊಪ್ಪಳ ತಾಲೂಕಿನ ಕರ್ಕಿಹಳ್ಳಿಯಲ್ಲಿ ಬುಧವಾರ ಅಪಾರ ಭಕ್ತರ ಸಮ್ಮುಖದಲ್ಲಿ ಮೃತ್ಯುಂಜಯೇಶ್ವರ ಸ್ವಾಮಿ ರಥೋತ್ಸವ ನೆರವೇರಿತು.
ಕೊಪ್ಪಳ ತಾಲೂಕಿನ ಕರ್ಕಿಹಳ್ಳಿಯಲ್ಲಿ ಬುಧವಾರ ಅಪಾರ ಭಕ್ತರ ಸಮ್ಮುಖದಲ್ಲಿ ಮೃತ್ಯುಂಜಯೇಶ್ವರ ಸ್ವಾಮಿ ರಥೋತ್ಸವ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ಕಿಹಳ್ಳಿಯಲ್ಲಿ ಆಚರಣೆ
ಕೊಪ್ಪಳ: ತಾಲೂಕಿನ ಕರ್ಕಿಹಳ್ಳಿ ಗ್ರಾಮದ ಮೃತ್ಯುಂಜಯೇಶ್ವರ (ಶಿವಚಿದಂಬರೇಶ್ವರ) ಮಹಾರಥೋತ್ಸವ ಬುಧವಾರ ಅಪಾರ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿತು.
ಬೆಳಗಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದರು. ಅಖಂಡವೀಣಾ ಮಂಗಳ, ಮಹಾರಥೋತ್ಸವದ ರಥಾಂಗ ಹೋಮ, ಆರತಿ, ನೈವೇದ್ಯ ಭಕ್ತರಿಂದ ದೀರ್ಘದಂಡ ನಮಸ್ಕಾರ, ವಿವಿಧ ಸ್ವಾಮೀಜಿಗಳ ಪಾದಪೂಜೆ, ಮೃತ್ಯುಂಜಯೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ನಡೆಯಿತು. ಮಧ್ಯಾಹ್ನ ಒಂದು ಗಂಟೆಗೆ ಭಕ್ತರ ಜಯಘೋಷದೊಂದಿಗೆ ರಥೋತ್ಸವ ನೆರವೇರಿತು.
ಗುರು ಸುರೇಶ ಪಾಟೀಲ ಮಾತನಾಡಿ, ಚಿದಂಬರ ನಾಮಸ್ಮರಣೆಯಿಂದ ಸಕಲ ಕಷ್ಟಗಳು ದೂರವಾಗುತ್ತವೆ. ಭಕ್ತರ ಉದ್ಧಾರಕ್ಕಾಗಿಯೇ ಬಂದ ಶಿವನ ಅವತಾರವೇ ಚಿದಂಬರ ಸ್ವಾಮಿ. ಅವರ ನಾಮಸ್ಮರಣೆಯಿಂದ ಕಷ್ಟಗಳು ಪರಿಹಾರವಾಗುತ್ತವೆ. ಭಗವಂತನ ದರ್ಶನ ಪಡೆಯಲು ಪ್ರತಿದಿನ ಭಕ್ತರು ದೇವಸ್ಥಾನದಲ್ಲಿ ಬರಬೇಕು. ಆದರೆ ಮಹಾರಥೋತ್ಸವದ ದಿನದಂದು ದೇವರಿಗೆ ಆಶೀರ್ವಾದ ಮಾಡಲು ದೇವರೇ ನೀವಿರುವ ಜಾಗದಲ್ಲಿ ಬರುತ್ತಾನೆ ಎಂದರು.
ಬಿಸರಳ್ಳಿಯ ಗವಿಮಠದ ಶಿವಶಾಂತವೀರ ಸ್ವಾಮೀಜಿ ಮಾತನಾಡಿ, ಮನುಷ್ಯ ಪರೋಪಕಾರಿಯಾಗಿ ಬಾಳಬೇಕು. ಹಿರಿಯರಿಗೆ, ದೇವರಿಗೆ ಶರಣಾದಾಗ ಬದುಕಿಗೆ ನೆಮ್ಮದಿ ದೊರೆಯಲಿದೆ ಎಂದು ತಿಳಿಸಿದರು.
ಆನಂದವನ ಅಗಡಿಯ ಗುರುದತ್ತ ಮೂರ್ತಿ ಚಕ್ರವರ್ತಿ, ವಿಶ್ವನಾಥ ಚಕ್ರವರ್ತಿ, ವಿವಿಧ ದೀಕ್ಷೀತರು, ಸ್ವಾಮೀಜಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net