ಗಣಿತ ಸ್ಪರ್ಧೆಯಲ್ಲಿ ಶಾರದಾ ಶಾಲೆ ಮಕ್ಕಳ ಸಾಧನೆ

ಕೊಪ್ಪಳ ತಾಲೂಕಿನ ಕಿಡದಾಳ ಶ್ರೀ ಶಾರದಾ ಇಂಟರ್ನ್ಯಾಷನಲ್​ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರ್ಯಭಟ ಕ್ವೆಸ್ಟ್​-3.0 ಅಂತರ ಶಾಲಾ ಗಣಿತ ಸ್ಪರ್ಧೆಯಲ್ಲಿ ಆರಾಧ್ಯ ಬಿ.ಎಂ ಪ್ರಥಮ ಸ್ಥಾನ ಪಡೆದರು. ಗುರುರಾಯ ಕೋಚಿಂಗ್​ ಸೆಂಟರ್​ನ ಸಂಸ್ಥಾಪಕ ನಿರ್ದೇಶಕ ರಾಘವೇಂದ್ರ ಕುಲಕರ್ಣಿ, ಶಾರದಾ ಸಂಸ್ಥೆ ನಿರ್ದೇಶಕ ಕಿರಣ್​ ಪಾಟೀಲ್​ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಆರ್ಯಭಟ ಕ್ವೆಸ್ಟ್​-3.0 ಅಂತರ ಶಾಲಾ ಗಣಿತ ಸ್ಪರ್ಧೆ
ಕೊಪ್ಪಳ : ತಾಲೂಕಿನ ಕಿಡದಾಳ ಗ್ರಾಮದ ಶ್ರೀ ಶಾರದಾ ಇಂಟರ್ನ್ಯಾಷನಲ್​ ಶಾಲೆಯಲ್ಲಿ ಭಾನುವಾರ ಶ್ರೀ ಗುರುರಾಯ ಆರ್ಯಭಟ ಕ್ವೆಸ್ಟ್​-3.0 ಅಂತರ ಶಾಲಾ ಗಣಿತ ಸ್ಪರ್ಧೆ ಯಶಸ್ವಿಯಾಗಿ ಜರುಗಿತು.
ವಿವಿಧ ಶಾಲೆಗಳಲ್ಲಿ ನಡೆದ ಪ್ರಾಥಮಿಕ ಹಂತದ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂತಿಮ ಹಂತದ ಲಿಖಿತ ಪರೀಕ್ಷೆ ಹಾಗೂ ಬಜಾರ್​ ರೌಂಡ್ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಗಣಿತ ವಿಷಯದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಮತ್ತು ಜ್ಞಾನ ಪರೀಕ್ಷಿಸುವ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಭಾಗಿಯಾದರು.
ಶಾರದಾ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಅದ್ವಿತ್​ ಎ. ಶೆಟ್ಟಿ ಪ್ರಥಮ ಸ್ಥಾನ, 7ನೇ ತರಗತಿಯ ಆರಾಧ್ಯ ಬಿ.ಎಂ ಪ್ರಥಮ ಸ್ಥಾನ ಹಾಗೂ ಸಾಕೇತ್​ ಕುಮಾರ್​ ದ್ವೀತಿಯ ಸ್ಥಾನ ಪಡೆದು ಅದ್ಭುತ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದರು.
ಗುರುರಾಯ ಕೋಚಿಂಗ್​ ಸೆಂಟರ್​ನ ಸಂಸ್ಥಾಪಕ ನಿರ್ದೇಶಕ ರಾಘವೇಂದ್ರ ಕುಲಕರ್ಣಿ, ಶಾರದಾ ಸಂಸ್ಥೆ ನಿರ್ದೇಶಕ ಕಿರಣ್​ ಪಾಟೀಲ್​, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net