ಶರಣಬಸವೇಶ್ವರ ಪುರಾಣ ಮಂಗಲೋತ್ಸವ

ಕನಕಗಿರಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ನಿಮಿತ್ತ ಮಂಗಳವಾರ ಕುಂಭೋತ್ಸವ ಜರುಗಿತು.
ಕನಕಗಿರಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ನಿಮಿತ್ತ ಮಂಗಳವಾರ ಕುಂಭೋತ್ಸವ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ವಾದ್ಯ
  • ಮೇಳ
  • ಭಾವಚಿತ್ರ
ಕನಕಗಿರಿ: ತಾಲೂಕಿನ ಕಲಕೇರಿ ಗ್ರಾಮದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಜಾತ್ರಾಮಹೋತ್ಸವ ಅಂಗವಾಗಿ ಮಂಗಳವಾರ ಕುಂಭೋತ್ಸವ ಹಾಗೂ ಶ್ರೀ ಶರಣರ ಭಾವಚಿತ್ರ ಮೆರವಣಿಗೆ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು.
ಡೊಳ್ಳು ವಾದ್ಯಗಳು ಮೆರವಣಿಗೆಗೆ ಶೋಭೆ ತಂದವು. ಪುರವಂತರಿಂದ ಭಕ್ತರಿಗೆ ಶಸ್ತ್ರ ಹಾಕಲಾಯಿತು. ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿ ಸಮರ್ಪಿಸಿದರು. ಪುರಾಣ ಮುಕ್ತಾಯ ಹಿನ್ನೆಲೆಯಲ್ಲಿ ಫೆ.18ರಂದು 11ಜೋಡಿ ಸಾಮೂಹಿಕ ವಿವಾಹ ನಡೆಯಲಿವೆ.
ಮೈನಳ್ಳಿಯ ಸಿದ್ದೇಶ್ವರ ಶ್ರೀಗಳು, ಸೂಳೆಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ತಾತ, ಪ್ರಮುಖರಾದ ವಿಶ್ವನಾಥ ಸ್ವಾಮಿ, ಶಿವಮೂರ್ತಿಸ್ವಾಮಿ, ಮಲ್ಲಪ್ಪ ಹೊಸಳ್ಳಿ, ಬಸವರಾಜ, ಹನುಮೇಶ, ವಿರೂಪಾಕ್ಷಪ್ಪ ಮಡಿವಾಳ, ಲಿಂಗರಾಜ, ಮಂಜುನಾಥ, ಪಂಪಾಪತಿ ಗಂಗಾಮತ, ವೀರಭದ್ರಪ್ಪ, ಶಿವಲಿಂಗನಗೌಡ, ಲೆಂಕೆಪ್ಪ, ರಾಘವೇಂದ್ರ, ಶರಣಬಸವ, ವಿರೂಪಾಕ್ಷಿ, ಬೆಟ್ಟಪ್ಪ, ಸಿದ್ದಪ್ಪ, ಯಮನೂರಪ್ಪ, ನಾಗರಾಜ, ಮಲ್ಲಪ್ಪ, ದುರಗಪ್ಪ, ನಿರುಪಾದಿ, ಗ್ಯಾನಪ್ಪ, ಸುರೇಶ ಗದ್ದಿ, ದುರಗಪ್ಪ ಗಂಗಾಮತ, ಹನುಮೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net