ಶೈಕ್ಷಣಿಕ ಕ್ಷೇತ್ರಕ್ಕೆ ಶಾಮನೂರು ಕೊಡುಗೆ ಅಪಾರ

ಕುಕನೂರಿನಲ್ಲಿ ಹಮ್ಮಿಕೊಂಡಿದ್ದ ಶಾಸಕ ಶಾಮನೂರು ಶಿವಶಂಕರಪ್ಪಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ಮಹಾಸಭಾ ಸದಸ್ಯ ಎಂ.ಎಸ್.ಹಿರೇಮಠ ಮಾತನಾಡಿದರು. ತಾಲೂಕು ಅಧ್ಯಕ್ಷ ಬಸವನಗೌಡ ಪಾಟೀಲ್, ಡಾ.ಮಹಾದೇವ ಸ್ವಾಮೀಜಿ, ಇಟಗಿ ಶ್ರೀ ಗುರುಶಾಂತವೀರ ಸ್ವಾಮೀಜಿ, ಪ್ರಮುಖರಾದ ಈರಣ್ಣ ಅಣ್ಣಿಗೇರಿ, ಬಸಣ್ಣ ದಿವಟರ, ಮಲ್ಲಿಕಾರ್ಜುನ ಕರಮುಡಿ, ತಿಪ್ಪಣ್ಣ ಚಿಕ್ಕಮ್ಯಾಗೇರಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಮನೂರು ಶಿವಶಂಕರಪ್ಪ
  • ಶ್ರದ್ಧಾಂಜಲಿ ಕಾರ್ಯಕ್ರಮ
  • ಶೈಕ್ಷಣಿಕ ಕ್ಷೇತ್ರ

ಶೈಕ್ಷಣಿಕ ಕ್ಷೇತ್ರಕ್ಕೆ ಶಾಮನೂರು ಕೊಡುಗೆ ಅಪಾರ

ಕುಕನೂರು: ವೀರಶೈವ ಸಮಾಜಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದು ಜಿಲ್ಲಾ ವೀರಶೈವ ಮಹಾಸಭಾ ಸದಸ್ಯ ಎಂ.ಎಸ್.ಹಿರೇಮಠ ಹೇಳಿದರು.
ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಮತ್ತು ಶ್ರೀಮಠದಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಕೇಂದ್ರ ಸಚಿವ ಶಿವರಾಜ ಪಾಟೀಲ್, ಗದಿಗೆಪ್ಪ ಪವಾಡಶೆಟ್ಟಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಶಾಮನೂರು ಕೊಡುಗೆ ಅಪಾರ ಎಂದರು.
ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬಸನಗೌಡ ಪಾಟೀಲ್, ಡಾ.ಮಹಾದೇವ ಸ್ವಾಮೀಜಿ, ಇಟಗಿ ಶ್ರೀ ಗುರುಶಾಂತವೀರ ಸ್ವಾಮೀಜಿ, ಪ್ರಮುಖರಾದ ಈರಣ್ಣ ಅಣ್ಣಿಗೇರಿ, ಬಸಣ್ಣ ದಿವಟರ, ಮಲ್ಲಿಕಾರ್ಜುನ ಕರಮುಡಿ, ತಿಪ್ಪಣ್ಣ ಚಿಕ್ಕಮ್ಯಾಗೇರಿ, ಶರಣಪ್ಪ ಗದಿಗೇರಿ, ವಿಶ್ವನಾಥ ಕುಷ್ಟಗಿ, ಅಶೋಕಯ್ಯ ಹಿರೇಮಠ, ಸಂಗಮೇಶ ಕಲ್ಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net