13 ಜನರಿಗೆ ಗಾಯವಾಗಿದ್ದು, ನಾಲ್ವರನ್ನು ವಿಜಯನಗರ, 9 ಜನರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಜಯ್ (22), ನಾಗರಾಜು (34), ಅರುಣಮ್ಮ (40) ಅವರ ಬೆನ್ನುಮೂಳೆ, ಸೊಂಟದ ಎಲುಬುಗಳು ಮುರಿದಿವೆ. ಸವಿತಾ (26) ಎರಡು ಭುಜದ ಮೂಳೆಗಳು ತುಂಡಾಗಿವೆ. ಮೃತ ಮಂಜಮ್ಮ ಪುತ್ರಿ ಅಂಜಲಿ (4) ಗಾಯಗೊಂಡಿದ್ದು ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ. ಚೇತನ್(6), ರೇಣುಕಾ (40), ರತ್ನಮ್ಮ (37) ಗಾಯಗೊಂಡಿದ್ದು ಕೊಪ್ಪಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.