ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ

ಕೊಪ್ಪಳದಲ್ಲಿ ಹೊಲಿಗೆ ಯಂತ್ರ ತರಬೇತಿ ಪಡೆದ ಮಹಿಳೆಯರಿಗೆ ಮಂಗಳವಾರ ಪ್ರಮಾಣ ಪತ್ರ ವಿತರಿಸಲಾಯಿತು.
ಕೊಪ್ಪಳದಲ್ಲಿ ಹೊಲಿಗೆ ಯಂತ್ರ ತರಬೇತಿ ಪಡೆದ ಮಹಿಳೆಯರಿಗೆ ಮಂಗಳವಾರ ಪ್ರಮಾಣ ಪತ್ರ ವಿತರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸೇವಾಭಾರತಿ ಮಹಿಳಾ ಸ್ವಾವಲಂಬನ ಕೇಂದ್ರ
ಕೊಪ್ಪಳ: ನಗರದ ಸೇವಾಭಾರತಿ ಮಹಿಳಾ ಸ್ವಾವಲಂಬನ ಕೇಂದ್ರದಿಂದ ಆಯೋಜಿಸಲಾಗಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಮಂಗಳವಾರ ಯಶಸ್ವಿಯಾಗಿ ಜರುಗಿತು. ತರಬೇತಿ ಪೂರೈಸಿದ ಸುಮಾರು 80 ಮಹಿಳೆಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಸೇವಾಭಾರತಿಯ ಕರ್ನಾಟಕ ಉತ್ತರ ಪ್ರಾಂತದ ಸಂಯೋಜಕರಾದ ಶಂಕರ ಗುಮಾಸ್ತೆ ಅವರು ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕು ಎನ್ನುವುದೇ ಸ್ವಾವಲಂಬನ ಕೇಂದ್ರದ ಮುಖ್ಯ ಧ್ಯೇಯೋದ್ದೇಶ. ಕೌಶಲ್ಯಯುತ ತರಬೇತಿಯು ಅವರ ಬದುಕಿಗೆ ಆಸರೆಯಾಗಲಿದೆ ಎಂದು ತಿಳಿಸಿದರು.
ಭಾಗ್ಯನಗರದ ಸೀರೆ ವರ್ತಕ ಏಕನಾಥಪ್ಪ ದೇವದುರ್ಗ ಮತ್ತು ಕೊಪ್ಪಳ ಇನ್ನರ್​ ವೀಲ್​ ಕ್ಲಬ್​ನ ಶರಣಮ್ಮ ಅಮರೇಶ ಪಾಟೀಲ ಅವರು ಸೇವಾಭಾರತಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಸೇವಾ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಂಘಚಾಲಕ ಬಸವರಾಜ ಡಂಬಳ, ಸೇವಾಭಾರತಿ ಬಳ್ಳಾರಿ ವಿಭಾಗದ ಸಂಯೋಜಕ ಪ್ರಾಣೇಶ ಜೋಶಿ, ವಿದ್ಯಾ ವಿಕಾಸ ಪ್ರಕಲ್ಪದ ನಗರ ಸಮಿತಿ ಸದಸ್ಯ ಹನುಮೇಶ ಹೂಲಗೇರಿ, ಸ್ವಾವಲಂಬನ ಕೇಂದ್ರದ ಸಂಯೋಜಕ ಶ್ರೀನಿವಾಸ ದೇಸಾಯಿ, ಮಹಾದೇವಪ್ಪ ಕೌಲಗಿ, ಕೇಂದ್ರದ ಸಹ ಸಂಯೋಜಕ ಬಸವರಾಜ ಸಮಗಂಡಿ, ತರಬೇತಿ ನೀಡಿದ ಶಿಕ್ಷಕಿಯರಾದ ಶೀತಲ ಜಾಧವ, ಮಂದಾರ ಉಂಕಿ, ಹಾಗೂ ಜಯಶ್ರೀ ಪಲ್ಲೇದ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net