ರಾಜಿ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ

ಮಹಾಂತೇಶ ಎಸ್​. ದರಗದ.
ಮಹಾಂತೇಶ ಎಸ್​. ದರಗದ.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾ.ಮಹಾಂತೇಶ ಎಸ್​.ದರದಗ ಸೂಚನೆ
ಕೊಪ್ಪಳ : ಮುಂಬರುವ ಮಾರ್ಚ್​ 14ರಂದು ನಡೆವ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ಎಲ್ಲ ಇಲಾಖೆಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಪರಿಸಿಕೊಳ್ಳಿ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ, ಜಿಲ್ಲಾ ಕಾನೂನುಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್​.ದರಗದ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಕಾನೂನು ಸೇವಾ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸಾಕಷ್ಟು ಜನರಿಗೆ ಕಾನೂನು ಅರಿವೇ ಇಲ್ಲ. ನಾವು ಮಾಹಿತಿ ನೀಡುವ ಕೆಲಸ ಮಾಡಬೇಕು. ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ರಾಜಿ ಸಂಧಾನ ಮೂಲಕ ಪರಿಹರಿಸಿಕೊಳ್ಳಬಹುದು. ಮಾರ್ಚ್​ 14ರಂದು ಅದಾಲತ್​ ನಡೆಯಲಿದ್ದು, ಈ ಬಗ್ಗೆ ಜನರಿಗೆ ಅರಿವು ಮೂಡಿಸಿ. ನಗರಸಭೆ ವಾಹನಗಳು, ಬಸ್​ ನಿಲ್ದಾಣಗಳಲ್ಲಿ ಪ್ರಚರುರಪಡಿಸಿ. ರಾಜಿ ಮೂಲಕ ಪ್ರಕರಣಗಳು ಇತ್ಯರ್ಥವಾದರೆ ಜನರ ಸಮಯ ಮತ್ತು ಅವರ ಸಂಬಂಧಗಳು ಉಳಿಯುತ್ತವೆ. ಈ ಸಲ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಿದ್ದು, ನಿಮ್ಮೆಲ್ಲರ ಸಹಕಾರ ಅವಶ್ಯ.
ಬಹುತೇಕ ಪ್ರಕರಣಗಳು ಸಂಬಂಧಿಗಳ ಆಸ್ತಿ ವಿಭಜನೆಗೆ ಸೇರಿರುತ್ತವೆ. ಮನೆಯಲ್ಲಿಯೇ ಕುಳಿತು ಪರಿಹರಿಸಿಕೊಳ್ಳಬಹುದು. ಆದರೆ, ನ್ಯಾಯಲಯಕ್ಕೆ ಬರುತ್ತಾರೆ. ಅಹಂಕಾರದಿಂದ ಬಹುತೇಕ ವಿಚ್ಛೇಧನ ಪ್ರಕರಣಗಳು ಕೋರ್ಟ್​ ಮೆಟ್ಟಿಲೇರುತ್ತವೆ. ಪರಸ್ಪರ ಹೊಂದಿಕೊಂಡರೆ ಸಮಸ್ಯೆ ಇರದು. ಎಲ್ಲರೂ ಅದಾಲತ್​ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ತಹಸೀಲ್ದಾರ್​ ಬಸವರಾಜ, ಪರಸರ ಇಲಾಖೆ ಅಧಿಕಾರಿ ವೈ.ಎಸ್​.ಹರಿಶಂಕರ್​, ಅಬಕಾರಿ ಅಧೀಕ್ಷಕ ಆಂಜನೇಯ, ವಾರ್ತಾಧಿಕಾರಿ ಡಾ.ಸುರೇಶ ಜಿ., ಕಾರ್ಮಿಕ ನಿರೀಕ್ಷಕಿ ಮಂಜುಳಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net