ವಿಕಲಾಂಗರ ಸೇವೆ ದೇವರ ಸೇವೆ

ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲ ಮಕ್ಕಳ ವೈದ್ಯಕಿಯ ತಪಾಸಣೆ ಶಿಬಿರವನ್ನು ಬಿಇಒ ಹನುಮಂತಪ್ಪ ಉದ್ಘಾಟಿಸಿದರು. ಪ್ರಮುಖರಾದ ಶರಣಬಸನಗೌಡ ಪಾಟೀಲ್​, ಬೀರಪ್ಪ ಅಂಡಗಿ, ಮಲ್ಲಿಕಾರ್ಜುನ ಪೂಜಾರ, ಬಲರಾಮ ಪೂಜಾರ ಇತರರಿದ್ದರು.
ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲ ಮಕ್ಕಳ ವೈದ್ಯಕಿಯ ತಪಾಸಣೆ ಶಿಬಿರವನ್ನು ಬಿಇಒ ಹನುಮಂತಪ್ಪ ಉದ್ಘಾಟಿಸಿದರು. ಪ್ರಮುಖರಾದ ಶರಣಬಸನಗೌಡ ಪಾಟೀಲ್​, ಬೀರಪ್ಪ ಅಂಡಗಿ, ಮಲ್ಲಿಕಾರ್ಜುನ ಪೂಜಾರ, ಬಲರಾಮ ಪೂಜಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಇಒ ಹನುಮಂತಪ್ಪ ಹೇಳಿಕೆ
  • ಅಂಗವಿಕಲ ಮಕ್ಕಳ ವೈದ್ಯಕಿಯ ತಪಾಸಣೆ
ಕೊಪ್ಪಳ: ವಿಕಲಾಂಗರ ಸೇವೆ ದೇವರ ಸೇವೆಗೆ ಸಮಾನ ಎಂದು ಬಿಇಒ ಹನುಮಂತಪ್ಪ ಹೇಳಿದರು.
ನಗರದ ಉರ್ದು ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಕಲಾಂಗ ಮಕ್ಕಳ ವೈದ್ಯಕಿಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅನೇಕ ಅಂಗವಿಕಲತೆಯನ್ನು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಲು ಸಾಧ್ಯವಿದೆ. ಕಾಲ ಕಾಲಕ್ಕೆ ತಪಾಸಣೆ, ಅಗತ್ಯ ಚಿಕಿತ್ಸೆಗೆ ಸರ್ಕಾರ ವ್ಯವಸ್ಥೆ ಮಾಡಿದೆ. ಸರ್ಕಾರದ ಯೋಜನೆಗಳ ಜತೆಗೆ ಪಾಲಕರು ವಿಕಲಾಂಗ ಮಕ್ಕಳ ಬಗ್ಗೆ ವಿಶೇಷ ಕಾಳಜಿ ತೋರಬೇಕು. ಉತ್ತಮ ಶಿಕ್ಷಣ ಕೊಡಿಸಿ. ಅವರ ಸೇವೆ ಭಾರವಲ್ಲ. ಅದೊಂದು ದೇವರ ಸೇವೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್​ ಮಾತನಾಡಿ, ಅಂಗವಿಕಲ ಮಕ್ಕಳು ತಮ್ಮ ನೂನ್ಯತೆ ಬಗ್ಗೆ ಚಿಂತಿಸಬೇಕಿಲ್ಲ. ವಿಶಾಲ ಭಾವನೆ ಬೆಳೆಸಿಕೊಳ್ಳಬೇಕು. ನಿಮ್ಮೊಳಗಿನ ಪ್ರತಿಭೆ ಹೊರಹಾಕುವ ಕೆಲಸ ಮಾಡಬೇಕು. ಅನೇಕ ಅಂಗವಿಕಲರು ಅತ್ಯುತ್ತಮ ಸಾಧನೆ ಮಾಡಿದ ಉದಾಹರಣೆಗಳಿವೆ. ಅವುಗಳನ್ನು ಸ್ಪೂರ್ತಿಯಾಗಿ ಪಡೆಯಬೇಕು. ಸರ್ಕಾರದಿಂದ ಸಿಗುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ಅಂಗವಿಕಲರು ತಮ್ಮ ವಿಕಲತೆಗೆ ಬಗ್ಗೆ ಕೀಳರಿಮೆ ಹೊಂದಬಾರದು. ಅದು ಶಾಪವಲ್ಲ. ಅದೊಂದು ವರ. ವಿಕಾಂಗ ಮಕ್ಕಳಿಗಾಗಿಯೇ ಸರ್ಕಾರ ಪ್ರತ್ಯೇಕ ಶಾಲೆಗಳನ್ನು ನಡೆಸುತ್ತಿದೆ. ಅಂಥ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಭೇಕು. ಅವರಿಗಾಗಿ ಇರುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಐಇಆರ್​ಟಿ ಶಿಕ್ಷಕ ಬಲರಾಮ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಅಕ್ಷರ ದಾಸೋಹ ಅಧಿಕಾರಿ ಮಲ್ಲಿಕಾರ್ಜುನ ಗುಡಿ, ಕ್ಷೇತ್ರ ಸಮನ್ವಯ ಅಧಿಕಾರಿ ಸೈಯದ್​ ಹುಸೇನ್​, ತಾಲೂಕು ಶಿಕ್ಷಕರ ಸಂದ ಅಧ್ಯಕ್ಷ ಹೊಳಿಬಸಯ್ಯ, ಪ್ರಮುಖರಾದ ನಫಿಜಖಾನ್​, ಬಸವರಾಜ ಕಮಲಾಪುರ, ಮಲ್ಲಿಕಾರ್ಜುನ ಪೂಜಾರ, ಶಿಕ್ಷಕರಾದ ಬಸವನಗೌಡ ಪಾಟೀಲ್​, ಲಕ್ಷ$್ಯಪ್ಪ ಪಲ್ಲೇದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net