ಸೇವಾ ಮನೋಭಾವದ ವೃತ್ತಿ ವಕೀಲಿಕೆ

ಕೊಪ್ಪಳದಲ್ಲಿ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ವಿ.ಕಣವಿ ಅವರು ನೂತನ ಅಧ್ಯಕ್ಷ ಪ್ರಕಾಶ್ ಬಿ.ಅನಂದಳ್ಳಿ ಅವರಿಗೆ ಸಂಘದ ದಾಖಲಾತಿ ನೀಡಿ ಅಧಿಕಾರ ಹಸ್ತಾಂತರಿಸಿದರು. ಬಳ್ಳಾರಿ ವಿಭಾಗದ ಹಿರಿಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ್, ಉಪಾಧ್ಯಕ್ಷ ಅಂದಾನಗೌಡ ಎಸ್.ಮಾಲಿಪಾಟೀಲ್, ಪ್ರ.ಕಾರ್ಯದರ್ಶಿ ಬಿ.ವಿ.ಸಜ್ಜನ್ ಇದ್ದರು.
ಕೊಪ್ಪಳದಲ್ಲಿ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ವಿ.ಕಣವಿ ಅವರು ನೂತನ ಅಧ್ಯಕ್ಷ ಪ್ರಕಾಶ್ ಬಿ.ಅನಂದಳ್ಳಿ ಅವರಿಗೆ ಸಂಘದ ದಾಖಲಾತಿ ನೀಡಿ ಅಧಿಕಾರ ಹಸ್ತಾಂತರಿಸಿದರು. ಬಳ್ಳಾರಿ ವಿಭಾಗದ ಹಿರಿಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ್, ಉಪಾಧ್ಯಕ್ಷ ಅಂದಾನಗೌಡ ಎಸ್.ಮಾಲಿಪಾಟೀಲ್, ಪ್ರ.ಕಾರ್ಯದರ್ಶಿ ಬಿ.ವಿ.ಸಜ್ಜನ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಳ್ಳಾರಿ ವಿಭಾಗದ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ ಹೇಳಿಕೆ
  • ಸಂಘದ ಪದಾಧಿಕಾರಿಗಳ ಪದಗ್ರಹಣ

ಕೊಪ್ಪಳ: ವಕೀಲಿಕೆ ಕೇವಲ ಉದ್ಯೋಗವಲ್ಲ, ಅದು ಸಾಮಾಜಿಕ ಬದ್ಧತೆಯೊಂದಿಗೆ ಕೂಡಿದ ಸೇವಾ ವೃತ್ತಿಯಾಗಿದೆ ಎಂದು ಬಳ್ಳಾರಿ ವಿಭಾಗದ ಹಿರಿಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ ಹೇಳಿದರು.

ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ-ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೃತ್ತಿ ಗೌರವ ಎತ್ತಿಹಿಡಿಯುವುದು ಪ್ರತಿ ವಕೀಲನ ಕರ್ತವ್ಯ. ಸಮಾಜದಲ್ಲಿ ಕಾನೂನಿನ ಗೌರವ ಹಾಗೂ ಅರಿವನ್ನು ಸಾಮಾನ್ಯ ಜನರಿಗೆ ತಲುಪಿಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ಕೊಡುಗೆ ನೀಡಬೇಕು. ಪ್ರತಿದಿನ ಕಾನೂನುಗಳಲ್ಲಿ ಬದಲಾವಣೆಗಳಾಗುತ್ತಿದ್ದು, ಅವುಗಳನ್ನು ಅರಿತುಕೊಂಡು ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಅಧ್ಯಕ್ಷ ಎ.ವಿ. ಕಣವಿ ಮಾತನಾಡಿ, ನೂತನ ಅಧ್ಯಕ್ಷರ ಅವಧಿಯಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಕಾಮಗಾರಿ ಪೂರ್ಣಗೊಂಡು ಜನರ ಸೇವೆಗೆ ಲೋಕಾರ್ಪಣೆಯಾಗಬೇಕು. ನಮ್ಮ ಅವಧಿಯಲ್ಲಿ 50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಸಂಘವು ಜಿಲ್ಲೆಯ 750ಕ್ಕೂ ಹೆಚ್ಚು ವಕೀಲರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಬೇಕು ಎಂದರು.
ವಕೀಲರ ಸಂಘದ ನೂತನ ಅಧ್ಯಕ್ಷ ಪ್ರಕಾಶ್ ಬಿ. ಅನಂದಳ್ಳಿ ಮಾತನಾಡಿ, ವಕೀಲರಿಗೆ ತರಬೇತಿ, ಗ್ರಂಥಾಲಯ ಅಭಿವೃದ್ಧಿ, ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಎಲ್ಲರ ಸಲಹೆ ಹಾಗೂ ಸಹಕಾರದೊಂದಿಗೆ ಜಿಲ್ಲಾ ನ್ಯಾಯಾಲಯದ ಗೌರವ ಕಾಪಾಡಲು ಶ್ರಮಿಸುತ್ತೇವೆ. ಜಿಲ್ಲಾ ನ್ಯಾಯಾಲಯ ಸಂಕೀರ್ಣ ಶೀಘ್ರದಲ್ಲೇ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಹೇಳಿದರು.
ಮುಖ್ಯ ಚುನಾವಣಾಧಿಕಾರಿ ಎಸ್.ವಿ. ಹಿರೇಮಠ ಹಾಗೂ ಸಹಾಯಕ ಚುನಾವಣಾಧಿಕಾರಿ ಬಿ.ವಿ. ಪಾಟೀಲ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಪದಾಧಿಕಾರಿಗಳಾಗಿ ಅಂದಾನಗೌಡ ಎಸ್.ಮಾಲಿಪಾಟೀಲ್, ಬಿ.ವಿ.ಸಜ್ಜನ್, ಬಸವರಾಜ ಎಚ್.ಮೇಲುಸಕ್ಕರೆ, ಪುಷ್ಪಾ ಬೇವೂರು, ಮಂಜುನಾಥ್ ಬಿ.ಗಡಾದ್ ಹಾಗೂ ಮಹಿಳಾ ಪ್ರತಿನಿಧಿ ರತ್ನಾ ಕೆಂಬಾವಿಮಠ ಅಧಿಕಾರ ಸ್ವೀಕರಿಸಿದರು. ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಲ್.ಹಾದಿಮನಿ ಹಾಗೂ ಯಲಬುರ್ಗಾ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಭಾಷ್ ಹೊಂಬಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net