ಸಮಾಜದ ಉನ್ನತಿಗೆ ವಿದ್ಯಾರ್ಥಿಗಳ ಸೇವೆ

ಗಂಗಾವತಿಯಲ್ಲಿ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ 1990ನೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸ್ನೇಹ ಸಮ್ಮೀಲನ-ಗುರುವಂದನಾ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಸಿ.ಎಚ್.ನಾರಿನಾಳ್ ಶನಿವಾರ  ಉದ್ಘಾಟಿಸಿದರು. ನಿವೃತ್ತ ಶಿಕ್ಷಕರಾದ ಆನಂದ ನಾಗಮ್ಮನವರ್, ಕಲ್ಲಯ್ಯ, ಕೆ.ಶರಭಣ್ಣ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಮ್ಮೀಲನ
  • ಗುರುವಂದನಾ
  • ವಿದ್ಯಾವರ್ಧಕ

ಗಂಗಾವತಿ: ನಗರದ ಎಸ್‌ಎಸ್‌ಎಲ್‌ಆರ್ ಸಭಾಂಗಣದಲ್ಲಿ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ 1990ನೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮೀಲನ-ಗುರುವಂದನಾ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ನಿವೃತ್ತ ಶಿಕ್ಷಕ ಸಿ.ಎಚ್.ನಾರಿನಾಳ್ ಮಾತನಾಡಿ, ಕಲಿತ ವಿದ್ಯಾರ್ಥಿಗಳ ಸೇವೆ ಸಮಾಜದ ಉನ್ನತಿಗೆ ಪೂರಕವಾಗಲಿ. ಕಲಿತವರಲ್ಲಿ ಕೆಲವರು ಉನ್ನತ ಹುದ್ದೆಯಲ್ಲಿರುವುದು ಸಾರ್ಥಕತೆ ಭಾವ ಎಂದರು. ನಿವೃತ್ತ ಶಿಕ್ಷಕರಾದ ಆನಂದ ನಾಗಮ್ಮನವರ್, ಕಲ್ಲಯ್ಯ, ಕೆ.ಶರಭಣ್ಣ, ಎಂ.ಎಸ್.ಪಾಟೀಲ್, ಕೆ.ಬಿ.ಆವರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು. ವಿದ್ಯಾರ್ಥಿ ಪ್ರತಿನಿಧಿಗಳಾದ ಡಾ.ರಾಜೇಶ, ಸೋಮನಾಥ ಸಮಗಂಡಿ, ಡಾ.ಚಾಂದ್‌ಪಾಶ, ಉದ್ಯಮಿ ಎಂ.ರವೀಂದ್ರನಾಥ ನಾಗಪ್ಪ, ನಾಗರಾಜ್ ಸ್ವಾಮಿ, ವೀರಣ್ಣ ಉಪ್ಪಿನ್ ಇತರರಿದ್ದರು.

22 ಜಿವಿಟಿ 06
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net