ಅಳವಂಡಿ: ಸ್ಪಷ್ಟವಾದ ಗುರಿ, ಸಕರಾತ್ಮಕ ಚಿಂತನೆಯಿಂದ ಯಶಸ್ಸು ಕಾಣಲು ಸಾಧ್ಯ ಎಂದು ಶಿಕ್ಷಣ ಪ್ರೇಮಿ ನೀಲಪ್ಪ ಕರಿಗಾರ ಹೇಳಿದರು.
ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪೌಢಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಅಗ್ನಿವೀರ ಸೈನಿಕರಾಗಿ ಆಯ್ಕೆಯಾದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ತ್ಯಾಗ ಮನೋಭಾವನೆಯಿಂದ ದೇಶದ ರಕ್ಷಣೆ ಮಾಡಬೇಕೆಂಬ ಸದಾಶಯದಿಂದ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ನಿಷ್ಠೆಯಿಂದ ಸೇನೆಯಲ್ಲಿ ಕಾರ್ಯ ನಿರ್ವಹಿಸಿ. ನೀವು ಆಯ್ಕೆಯಾಗಿರುವುದು ಗ್ರಾಮೀಣ ಜನರಿಗೆ ಪ್ರೇರಣೆ ಎಂದರು.
ಮುಖ್ಯಶಿಕ್ಷಕ ವೀರಣ್ಣ ಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶ ಸೇವೆ ಎಂದರೆ ಜನಾರ್ದನ ಸೇವೆ. ಅದು ಸತ್ಯ ಹಾಗೂ ಪ್ರಾಮಾಣಿಕತೆಯಿಂದ ಕೂಡಿರಬೇಕು. ಆಗ ವಿದ್ಯಾರ್ಥಿಗಳಿಗೆ ಸ್ಫೂರ್ತಿ ದಾಯಕವಾಗಲಿದೆ ಎಂದರು.