ತಾಂತ್ರಿಕ ವಿಭಾಗಕ್ಕೆ ಪ್ರತ್ಯೇಕ ಹಾಸ್ಟೆಲ್ ಆರಂಭಿಸಿ

ಹಾಸ್ಟೆಲ್‌ಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ಸದಸ್ಯರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ರಾಜ್ಯ ಸಹ ಸಂಚಾಲಕ ಅಭಿಷೇಕ ಹಿರೇಮಠ, ಪದಾಧಿಕಾರಿಗಳಾದ ಕಿರಣವಸದ್, ಹನುಮೇಶ, ವಿನಯ್ ಇತರರಿದ್ದರು.
ಹಾಸ್ಟೆಲ್‌ಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ಸದಸ್ಯರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ರಾಜ್ಯ ಸಹ ಸಂಚಾಲಕ ಅಭಿಷೇಕ ಹಿರೇಮಠ, ಪದಾಧಿಕಾರಿಗಳಾದ ಕಿರಣವಸದ್, ಹನುಮೇಶ, ವಿನಯ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • * ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ಒತ್ತಾಯ
  • ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ

ಗಂಗಾವತಿ: ಸರ್ಕಾರವಿವಿಧ ಇಲಾಖೆ ಹಾಸ್ಟೆಲ್‌ಗಳಲ್ಲಿಮೂಲ ಸೌಕರ್ಯ ಕಲ್ಪಿಸುವುದು ಮತ್ತುತಾಂತ್ರಿಕ ವಿಭಾಗಕ್ಕೆ ಪ್ರತ್ಯೇಕಹಾಸ್ಟೆಲ್ ಆರಂಭಿಸುವಂತೆ ಒತ್ತಾಯಿಸಿಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಾಲೂಕು ಘಟಕದ ಸದಸ್ಯರು ನಗರದಶ್ರೀಕೃಷ್ಣದೇವರಾಯ ವೃತ್ತದಲ್ಲಿಮಂಗಳವಾರ ಪ್ರತಿಭಟನೆ ನಡೆಸಿದರು.

ಹಾಸ್ಟೆಲ್‌ಗಳಲ್ಲಿಹಾಳಾಗಿರುವ ಅಗತ್ಯವಸ್ತುಗಳೊಂದಿಗೆಪ್ರತಿಭಟನೆ ನಡೆಸಿದ ಪರಿಷತ್ಪದಾಧಿಕಾರಿಗಳು,ಬೇಡಿಕೆಮನವಿಯನ್ನು ಗ್ರೇಡ್-2ತಹಸೀಲ್ದಾರ್ಮಹಾಂತಗೌಡ ಗೌಡರ್‌ಗೆ ಸಲ್ಲಿಸಿದರು.ವಿವಿಧಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳುಹೋರಾಟಕ್ಕೆ ಸಾಥ್ ನೀಡಿದರು.

ಪರಿಷತ್ರಾಜ್ಯ ಸಹ ಸಂಚಾಲಕ ಅಭಿಷೇಕ ಹಿರೇಮಠಮಾತನಾಡಿ,ಹಾಸ್ಟೆಲ್‌ಗಳಲ್ಲಿಮೂಲ ಸೌಕರ್ಯ ಕಲ್ಪಿಸುವಲ್ಲಿಸರ್ಕಾರ ವಿಲವಾಗಿದ್ದು,ಹಾಸಿಗೆವ್ಯವಸ್ಥೆಯಿಲ್ಲ ಮತ್ತು ಸ್ನಾನ,ಶೌಚಗೃಹಸ್ವಚ್ಛಗೊಳಿಸುತ್ತಿಲ್ಲ.ಕಳಪೆಗುಣಮಟ್ಚದ ಉಪಹಾರ,ಆಹಾರವಿತರಿಸಲಾಗುತ್ತಿದ್ದು,ಶುಚಿತ್ವಇಲ್ಲದಂತಾಗಿದೆ.ಸಿಬ್ಬಂದಿಕೊರತೆಯಿಂದ ನಿರ್ವಹಣೆ ಲೋಪವಾಗಿದ್ದು,ಸೋಪುಕಿಟ್ ವಿತರಿಸುತ್ತಿಲ್ಲ.

ನಿಯೋಜನೆಗೊಂಡಸಿಬ್ಬಂದಿ ಸಮಯ ಪಾಲನೆ ಮಾಡದಿದ್ದರಿಂದವಿದ್ಯಾರ್ಥಿಗಳಿಗೆ ಸಮಯಕ್ಕೆಸರಿಯಾಗಿ ಉಪಹಾರ ಮತ್ತು ಆಹಾರದೊರೆಯುತ್ತಿಲ್ಲ.ಕೆಲಹಾಸ್ಟೆಲ್‌ಗಳಿಗೆ ಕಾಂಪೌಂಡ್ಇಲ್ಲದಿದ್ದರಿಂದ ವಿದ್ಯಾರ್ಥಿಗಳಿಗೆರಕ್ಷಣೆಯಿಲ್ಲದಂತಾಗಿದೆ.ಇಂಜಿನಿಯರ್ಕಾಲೇಜು ಆರಂಭವಾಗಿದ್ದು,ವಿವಿಧಜಿಲ್ಲೆಗಳ ವಿದ್ಯಾರ್ಥಿಗಳಿಗೆಪ್ರವೇಶ ನೀಡಲಾಗಿದೆ.ಪ್ರತ್ಯೇಕಹಾಸ್ಟೆಲ್ ಕೊರತೆಯಿಂದ ದುಬಾರಿವೆಚ್ಚದ,ಸೌಲಭ್ಯಗಳಿಲ್ಲದಪಿಜಿಯಲ್ಲಿ ವಾಸಮಾಡುವ ಸ್ಥಿತಿಬಂದಿದೆ.

ಹಾಸ್ಟೆಲ್‌ಗಳಲ್ಲಿನಸಮಸ್ಯೆಗಳ ಪರಿಹಾರಕ್ಕೆ ಹಲವುಬಾರಿ ಅಧಿಕಾರಿಗಳ ಗಮನಕ್ಕೆ ತಂದರೂಪ್ರಯೋಜನವಾಗಿಲ್ಲ.ಬಿಸಿಎಂಇಲಾಖೆ ಸಚಿವ ಶಿವರಾಜ ತಂಗಡಗಿಜಿಲ್ಲೆಯಲ್ಲಿದ್ದರೂ,ಸೌಲಭ್ಯಕಲ್ಪಿಸುವಲ್ಲಿ ವಿಲವಾಗಿದ್ದಾರೆಎಂದು ದೂರಿದರು.ಇದೇಸಂದರ್ಭದಲ್ಲಿ ಬಿಸಿಎಂ,ಸಮಾಜಕಲ್ಯಾಣ ಇಲಾಖೆ,ಪರಿಶಿಷ್ಟಪಂಗಡ ಇಲಾಖೆ ಅಧಿಕಾರಿಗಳಿಗೆಮನವಿ ಸಲ್ಲಿಸಲಾಯಿತು.

ಪದಾಧಿಕಾರಿಗಳಾದಕಿರಣವಸದ್,ಹನುಮೇಶ,ವಿನಯ್,ಸುಪ್ರೀತ್,ಗಣೇಶ,ಮೌನೇಶ,ವಿಕಾಸ,ಬೆಟ್ಟಪ್ಪ,ನಂದಿತಾ,ದುರುಗಮ್ಮ,ಚನ್ನವೀರಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net