ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿ

ಕನಕಗಿರಿ ತಾಲೂಕಿನ ಹೊಸ ಜೀರಾಳ ಕಲ್ಗುಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಾಲ ಮೇಳ ಉದ್ಘಾಟನಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಕಟ್ಟಿಮನಿ, ಅಂಗನವಾಡಿ ಮೇಲ್ವಿಚಾರಕಿ ರತ್ನಮ್ಮ ತೋಳದ, ಪ್ರಮುಖರಾದ ರಮೇಶ, ವಿಜಯಾ ಸಕ್ರಪ್ಪ, ಮಲ್ಲನಗೌಡ, ಪಾಮಣ್ಣ, ಇತರರಿದ್ದರು.
ಕನಕಗಿರಿ ತಾಲೂಕಿನ ಹೊಸ ಜೀರಾಳ ಕಲ್ಗುಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಾಲ ಮೇಳ ಉದ್ಘಾಟನಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಕಟ್ಟಿಮನಿ, ಅಂಗನವಾಡಿ ಮೇಲ್ವಿಚಾರಕಿ ರತ್ನಮ್ಮ ತೋಳದ, ಪ್ರಮುಖರಾದ ರಮೇಶ, ವಿಜಯಾ ಸಕ್ರಪ್ಪ, ಮಲ್ಲನಗೌಡ, ಪಾಮಣ್ಣ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉದ್ಘಾಟನಾ ಕಾರ್ಯಕ್ರಮ
  • ಬೆಳವಣಿಗೆ

ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿ

ಕನಕಗಿರಿ: ಅಂಗನವಾಡಿಯ ಬಾಲ ಮೇಳಗಳು ಮಕ್ಕಳ ಸರ್ವತೋಮುಖ ಬೆಳವಣಿಗೆ ಸಹಕಾರಿಯಾಗಿವೆ ಎಂದು ಅಂಗನವಾಡಿ ಮೇಲ್ವಿಚಾರಕಿ ರತ್ನಮ್ಮ ತೋಳದ ಹೇಳಿದರು.
ತಾಲೂಕಿನ ಜೀರಾಳ ಗ್ರಾಪಂ ವ್ಯಾಪ್ತಿಯ ಹೊಸ ಜೀರಾಳ ಕಲ್ಗುಡಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕನಕಗಿರಿ, ಅಜೀಂ ಪ್ರೇಮ್ ಜೀ ಫೌಂಡೇಶನ್ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಲ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಸ್ವಚ್ಛತೆ, ಪೋಷಣೆ ಬಗ್ಗೆ ಅರಿವು ಮೂಡಿಸಬೇಕು. ಛದ್ಮವೇಷ, ಚಿತ್ರಕಲೆ, ಆಟೋಟ ಸ್ಪರ್ಧೆಗಳ ಮೂಲಕ ಕೌಶಲ ಬೆಳೆಸಲಾಗುತ್ತದೆ. ಮೇಳ ಮಕ್ಕಳ ಸಂತೋಷ, ಆರೋಗ್ಯ ಮತ್ತು ಕಲಿಕೆಯನ್ನು ಉತ್ತೇಜಿಸುವ ಉತ್ಸವವಾಗಿದೆ. ಪೌಷ್ಟಿಕ ಆಹಾರ ಮೇಳ ಆಯೋಜಿಸಿ ಪಾಲಕರಿಗೂ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಆದ್ದರಿಂದ ಪಾಲಕರು ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಬೇಕು. ಇಲ್ಲಿ ದೊರೆಯುವ ಸೇವೆಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ನಂತರ ಮಕ್ಕಳಿಂದ ನಾನಾ ಚಟುವಟಿಕೆ ನಡೆಸಲಾಯಿತು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಕಟ್ಟಿಮನಿ, ಶಿಕ್ಷಕ ಅಮರೇಶ ಎಲಿಗಾರ, ಅಜೀಂ ಪ್ರೇಮ್ ಜೀ ಫೌಂಡೇಶನ್‌ನ ಸತೀಶ, ಭರತೇಶ, ಅಂಗನವಾಡಿ ಕಾರ್ಯಕರ್ತೆಯರಾದ ಬಸಮ್ಮ, ಲಕ್ಷ್ಮೀ, ಮರಿಯಮ್ಮ, ಪ್ರಮುಖರಾದ ರಮೇಶ, ವಿಜಯಾ, ಮಲ್ಲನಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net