ಒಳ ಮೀಸಲು ಜಾರಿಗೆ ಆಗ್ರಹಿಸಿ ಅರೆ ಬೆತ್ತಲೆ ಮೆರವಣಿಗೆ

ಒಳ ಮೀಸಲು ಜಾರಿಗೆ ಆಗ್ರಹಿಸಿ ದಲಿತ ಮುಖಂಡರು ಗುರುವಾರ ಕೊಪ್ಪಳದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಬಿ.ಹುಸೇನಪ್ಪ ಸ್ವಾಮಿ ಮಾದಿಗ, ಹುಲಗಪ್ಪ ಹಿರೇಮನಿ, ಶಿವಪ್ಪ ಮಾದಿಗ, ಕುಂಡಪ್ಪ ಹೊಸಮನಿ ಇದ್ದರು.
ಒಳ ಮೀಸಲು ಜಾರಿಗೆ ಆಗ್ರಹಿಸಿ ದಲಿತ ಮುಖಂಡರು ಗುರುವಾರ ಕೊಪ್ಪಳದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಬಿ.ಹುಸೇನಪ್ಪ ಸ್ವಾಮಿ ಮಾದಿಗ, ಹುಲಗಪ್ಪ ಹಿರೇಮನಿ, ಶಿವಪ್ಪ ಮಾದಿಗ, ಕುಂಡಪ್ಪ ಹೊಸಮನಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಒಳ ಮೀಸಲು ಯಥಾವತ್​ ಜಾರಿಯಾಗಲಿ
  • ಅರೆ ಬೆತ್ತಲೆ ಮೆರವಣಿಗೆ ಮಾಡಿ ಖಂಡನೆ
ಕೊಪ್ಪಳ: ಪರಿಶಿಷ್ಟ ಜಾತಿಗಳಿಗೆ ಯಥಾವತ್ತಾಗಿ ಒಳ ಮೀಸಲು ಜಾರಿಗೊಳಿಸಬೇಕು. ಇಲ್ಲದಿದ್ದರೆ ಸರ್ಕಾರ ಪರಿಣಾಮ ಎದುರಿಸಬೇಕಾಗಲಿದೆ ಎಂದು ಆಗ್ರಹಿಸಿ ಅಖಿಲ ಭಾರತ ಮಾದಿಗ ದಂಡೋರ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿ ಸರ್ಕಾರಕ್ಕೆ ಎಚ್ಚರಿಸಿದರು.
ಒಳ ಮೀಸಲು ನೀಡುವಂತೆ ಸುಪ್ರೀಂ ಕೋರ್ಟ್​ ತಿಳಿಸಿ ವರ್ಷವೇ ಕಳೆದಿದೆ. ಏಳು ನ್ಯಾಯಾಧೀಶರಿದ್ದ ಪೀಠ ಈ ಬಗ್ಗೆ ಮಹತ್ವದ ತೀರ್ಪು ನೀಡಿದೆ. ಹೀಗಿದ್ದರೂ ಜಾರಿಗೆ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಸಿಎಂ ಸಿದ್ದರಾಮಯ್ಯ ಹೊಸ ನಾಟಕ ಆಡುತ್ತಿದ್ದಾರೆ. ಇದರಿಂದ ನಮ್ಮ ಸಮುದಾಯಗಳಿಗೆ ಸಿಗಬೇಕಾದ ಶೇ.6ರಷ್ಟು ಮೀಸಲು ಸಿಗುತ್ತಿಲ್ಲ. ಈ ಮೂಲಕ ರಾಜ್ಯ ಸರ್ಕಾರ ಸಂವಿಧಾನಕ್ಕೆ ಅಪಮಾನ ಮಾಡುತ್ತಿದೆ. ಮೀಸಲಾತಿ ನಮ್ಮ ಹಕ್ಕು. ಯಾರೊಬ್ಬರ ಸ್ವತ್ತಲ್ಲವೆಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಖಂಡಿಸಿದರು.
ನಮ್ಮ ಸಂವಿಧಾನ ಬದ್ಧ ಹಕ್ಕು ಕಸಿಯಲು ಯಾವುದೇ ಕುತಂತ್ರ ಮಾಡಿದರೂ ನಾವು ಸಹಿಸುವುದಿಲ್ಲ. ಸರ್ಕಾರ ನಮ್ಮ ಪಾಲನ್ನು ನಮಗೆ ನೀಡಬೇಕು. ಒಳ ಮೀಸಲ ಉಜಾರಿ ಹೊರತು ಯಾವುದೇ ನೇಮಕಾತಿ ನಡೆಸಲು ಬಿಡುವುದಿಲ್ಲ. ರಾಜ್ಯದಲ್ಲಿ ಯಾವುದೇ ಹೊಸ ಸರ್ಕಾರಿ ನೇಮಕಾತಿ, ಬ್ಯಾಕ್​ಲಾಗ್​ ಹುದ್ದೆಗಳ ಭರ್ತಿ ಅಥವಾ ಮುಂಬಡ್ತಿ ನೀಡಕೂಡದು. ರಿಸರ್ವೇಶನ್​ ದೊರೆಯದಿದ್ದರೆ ನಮ್ಮ ಸಮುದಾಯದ ಸಾವಿರಾರು ಯುವಕರಿಗೆ ಅನ್ಯಾಯವಾಗಲಿದೆ. ತಕ್ಷಣ ಅನ್ಯಾಯ ಸರಿಪಡಿಸಿ. ಇಲ್ಲದಿದ್ದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಅಖಿಲ ಭಾರತ ಮಾದಿಗ ದಂಡೋರದ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಬಿ.ಹುಸೇನಪ್ಪ ಸ್ವಾಮಿ ಮಾದಿಗ, ಜಿಲ್ಲಾಧ್ಯಕ್ಷ ಹುಲಗಪ್ಪ ಹಿರೇಮನಿ, ಉಪಾಧ್ಯಕ್ಷ ಶಿವಪ್ಪ ಮಾದಿಗ, ಕಾರ್ಯದರ್ಶಿ ಕುಂಡಪ್ಪ ಹೊಸಮನಿ, ಪೂಜಪ್ಪ ಚಿಕ್ಕ ಮಾದಿನಾಳ, ಯಮನೂರಪ್ಪ, ಶಶಿಕುಮಾರ, ಹನುಮಂತ ನಾಗೇಶನಹಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net