ಕೊಪ್ಪಳದಲ್ಲಿ ಸ್ವಯಂ ಗಣತಿ ಆರಂಭ

ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ ಬುಧವಾರ ಪದ್ಮಶ್ರೀ ಪುರಸತ ಕಲಾವಿದೆ ಭೀಮವ್ವ ಶಿಳ್ಳಿಕ್ಯಾತರ್​ ಅವರಿಗೆ ಗಣತಿ ಮಾಹಿತಿ ನೀಡಿದ ಅಧಿಕಾರಿ.
ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ ಬುಧವಾರ ಪದ್ಮಶ್ರೀ ಪುರಸತ ಕಲಾವಿದೆ ಭೀಮವ್ವ ಶಿಳ್ಳಿಕ್ಯಾತರ್​ ಅವರಿಗೆ ಗಣತಿ ಮಾಹಿತಿ ನೀಡಿದ ಅಧಿಕಾರಿ.
Published on

ಪ್ರಮುಖ ಮುಖ್ಯಾಂಶಗಳು

  • ಜನಪ್ರತಿನಿಧಿಗಳು-ಅಧಿಕಾರಿಗಳು ಭಾಗಿ
  • ಏ.15ವರೆಗೆ ಮಾಹಿತಿ ಭರ್ತಿಗೆ ಅವಕಾಶ
ಕೊಪ್ಪಳ: ಜನಗಣತಿಗೆ ಬುಧವಾರ ಚಾಲನೆ ದೊರೆತಿದ್ದು, ಏ.15ವರೆಗೆ ಜನರು ಸ್ವಯಂ ಗಣತಿ ಮಾಡಿಕೊಂಡು ಮಾಹಿತಿ ಸಲ್ಲಿಕೆ ಮಾಡಬಹುದು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ ಸ್ವಯಂ ಗಣತಿ ಮಾಡಿಕೊಂಡು ಜನತೆಗೆ ಮಾಹಿತಿ ಒದಗಿಸಲು ಮನವಿ ಮಾಡಿದರು.
ಜಿಲ್ಲಾಡಳಿತ ಗಣತಿಗೆ ಸಜ್ಜಾಗಿದ್ದು ಎಲ್ಲ ಹಂತದ ಪೂರ್ವ ತಯಾರಿ ಮುಗಿಸಿದೆ. ಏ.16ರಿಂದ ಗಣತಿದಾರರ ಮನೆ&ಮನೆಗೆ ಭೇಟಿ ನೀಡಲಿದ್ದಾರೆ. ಮೊದಲ ಹಂತದಲ್ಲಿ ಏ.1ರಿಂದ 15ವರೆಗೆ ಜನರು ಸ್ವಯಂ ಘೋಷಣೆ ಮಾಡಿಕೊಳ್ಳಬಹುದು.
ಸಚಿವ ಶಿವರಾಜ ತಂಗಡಿ, ಸಂಸದ ರಾಜಶೇಖರ ಹಿಟ್ನಾಳ ಸ್ವಯಂ ಗಣತಿ ಮಾಡಿಕೊಂಡರು. ಅಲ್ಲದೆ ಎಲ್ಲ ಜನರು ತಮ್ಮ ಮೊಬೈಲ್​, ಲ್ಯಾಪಟಾಪ್​, ಕಂಪ್ಯೂಟರ್​ ಬಳಸಿ ಅಧಿಕೃತ ಗೆಬ್​ ಸೈಟ್​ ಮೂಲಕ ಮಾಹಿತಿ ನೀಡಿ. ದೇಶ, ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು. ಪದ್ಮಶ್ರೀ ಪುರಸತ ತೊಗಲುಗೊಂಬೆ ಕಲಾವಿದೆ ಭೀಮವ್ವ ಶಿಳ್ಳಿಕ್ಯಾತರ ಸಹ ಗಣತಿ ಬಗ್ಗೆ ಜಾಗೃತಿ ಮೂಡಿಸಿದರು.
ಹಿಟ್ನಾಳ ತಮ್ಮ ನಿವಾಸದಲ್ಲಿ ಗಣತಿ ಮಾಡಿಕೊಂಡರೆ, ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ತಮ್ಮ ಕಚೇರಿಯಲ್ಲಿ ಮಾಹಿತಿ ಭರ್ತಿ ಮಾಡಿ ಇತರರಿಗೂ ಮಾಡುವಂತೆ ಪ್ರೇರೇಪಿಸಿದರು. ಜನರು https://se.census.gov.in ವೆಬ್​ಸೈಟ್​ ಓಪನ್​ ಮಾಡಿ ಅದರಲ್ಲಿನ ಪ್ರಶ್ನೆಗಳಿಗೆ ಉತ್ತರ ಭರ್ತಿ ಮಾಡಬೇಕು. ಪೂರ್ಣ ಮಾಹಿತಿ ಒದಗಿಸಿದ ಬಳಿಕ ಐಡಿ ಬರಲಿದ್ದು ಅದನ್ನು ಸೇವ್​ ಮಾಡಿಕೊಳ್ಳಬೇಕು. ಗಣತಿದಾರರು ಬಂದಾಗ ಐಡಿ ನೀಡಿ ಗಣತಿ ಪೂರ್ಣಗೊಳಿಸಲು ಸಹಕರಿಸಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net