ರಾಷ್ಟ್ರಮಟ್ಟದ ಸರ್ಧೆಗೆ ಆಯ್ಕೆ

ಪ್ರಶಾಂತ ಪುಂಡಗೌಡ
ಪ್ರಶಾಂತ ಪುಂಡಗೌಡ
Published on
ತಾವರಗೇರಾ: ಇಲ್ಲಿನ ಸರ್ಕಾರಿ ಅನುದಾನಿತ ಎನ್.ಎಂ. ದಂಡಿನ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಪ್ರಶಾಂತ ಪುಂಡಗೌಡ, ಪಂಜಾಬ್ ರಾಜ್ಯದ ರಾಜಧಾನಿ ಚಂಡಿಗಡದಲ್ಲಿ ಡಿ.12 ರಿಂದ 14ವರೆಗೆ ನಡೆಯಲಿರುವ ಆಟ್ಯಾ ಪಾಟ್ಯಾ ಆಟಕ್ಕೆ ಆಯ್ಕೆಯಾಗಿದ್ದಾರೆ.
ಚಾಂಪಿಯನ್‌ಶಿಪ್ ಟೀಮ್‌ನಲ್ಲಿ ಕರ್ನಾಟಕ ತಂಡದಿಂದ 12 ಜನ ಉನ್ನತ ಕ್ರೀಡಾ ಪಟುಗಳನ್ನು ಆಯ್ಕೆ ಮಾಡಿದ್ದು ಅವರಲ್ಲಿ ಪ್ರಶಾಂತ ಒಬ್ಬರಾಗಿದ್ದಾರೆ. ಇದಕ್ಕೂ ಮೊದಲು ಗದಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಆಟ್ಯಾ ಪಾಟ್ಯಾ ಸ್ಪರ್ಧೆಯಲ್ಲಿ 30 ತಂಡಗಳ 250 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಅವರಲ್ಲಿ 15 ಕ್ರೀಡಾಪಟುಗಳನ್ನು ಉತ್ತಮ ಆಟಗಾರರೆಂದು ಪರಿಗಣಿಸಿ ರಾಷ್ಟ್ರಮಟ್ಟದ ಸರ್ಧೆಗೆ ಆಯ್ಕೆ ಮಾಡಲಾಗಿದೆ ಎಂದು ಶಾಲೆಯ ಮುಖ್ಯಸ್ಥೆ ಉಷಾ ದಂಡಿನ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net