ಬೀಜೋಪಚಾರದಿಂದ ಇಳುವರಿ ಅಧಿಕ

ಸಿದ್ದಾಪುರ ಸಮೀಪದ ಜಮಾಪುರದಲ್ಲಿ ಮಣ್ಣಿನ ಸಂರಕ್ಷಣೆ ಮತ್ತು ಸಮತೋಲಿತ ರಸಗೊಬ್ಬರಗಳ ಬಳಕೆ ಕುರಿತು ವಿಶೇಷ ರೈತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೃಷಿ ಅಧಿಕಾರಿ ವೈ.ಸುಧಾಕರ್, ಕೃಷಿ ಇಲಾಖೆ ಸಿಬ್ಬಂದಿ ವಿದ್ಯಾವತಿ, ಮಂಜುನಾಥ, ಗೋಣೆಪ್ಪ ಹುಡೇದ್, ಶರಣಮ್ಮ ಇತರರಿದ್ದರು.
ಸಿದ್ದಾಪುರ ಸಮೀಪದ ಜಮಾಪುರದಲ್ಲಿ ಮಣ್ಣಿನ ಸಂರಕ್ಷಣೆ ಮತ್ತು ಸಮತೋಲಿತ ರಸಗೊಬ್ಬರಗಳ ಬಳಕೆ ಕುರಿತು ವಿಶೇಷ ರೈತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೃಷಿ ಅಧಿಕಾರಿ ವೈ.ಸುಧಾಕರ್, ಕೃಷಿ ಇಲಾಖೆ ಸಿಬ್ಬಂದಿ ವಿದ್ಯಾವತಿ, ಮಂಜುನಾಥ, ಗೋಣೆಪ್ಪ ಹುಡೇದ್, ಶರಣಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಅಧಿಕಾರಿ ವೈ.ಸುಧಾಕರ ಸಲಹೆ
  • ರಸಗೊಬ್ಬರ ಬಳಕೆ ಕುರಿತು ವಿಶೇಷ ತರಬೇತಿ
ಸಿದ್ದಾಪುರ: ಭತ್ತದ ಬೆಳೆಯಲ್ಲಿ ಉತ್ತಮ ಮೊಳಕೆ, ಆರೋಗ್ಯಕರ ಸಸಿ ಬೆಳವಣಿಗೆ ಹಾಗೂ ರೋಗಗಳ ನಿಯಂತ್ರಣಕ್ಕಾಗಿ ಬೀಜೋಪಚಾರ ಅಗತ್ಯ ಎಂದು ಗ್ರಾಮದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೈ.ಸುಧಾಕರ ಹೇಳಿದರು.
ಸಮೀಪದ ಜಮಾಪುರದಲ್ಲಿ ರೈತ ಸಂಪರ್ಕ ಕೇಂದ್ರದಿಂದ ಬುಧವಾರ ಹಮ್ಮಿಕೊಂಡಿದ್ದ ಮಣ್ಣಿನ ಸಂರಕ್ಷಣೆ ಮತ್ತು ಸಮತೋಲಿತ ರಸಗೊಬ್ಬರಗಳ ಬಳಕೆ ಕುರಿತು ವಿಶೇಷ ರೈತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಸಿಮಡಿ ಹಾಕುವ ಮುನ್ನ ಶಿಫಾರಸು ಮಾಡಿದ ಶಿಲೀಂಧ್ರನಾಶಕ ಅಥವಾ ಜೈವಿಕ ಉತ್ಪನ್ನಗಳಿಂದ ಬೀಜೋಪಚಾರ ಮಾಡಬೇಕು. ಇದರಿಂದ ಬೀಜಜನ್ಯ ಹಾಗೂ ಮಣ್ಣಿನಿಂದ ಹರಡುವ ರೋಗಗಳನ್ನು ತಡೆಯಬಹುದು. ಜತೆಗೆ ಸಸಿಗಳ ಸದೃಢ ಬೆಳವಣಿಗೆಗೆ ನೆರವಾಗಿ ಇಳುವರಿ ಹೆಚ್ಚಿಸುತ್ತದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಮಾತನಾಡಿ, ಭತ್ತದ ಬೆಳೆಯಲ್ಲಿ ಕಂಡುಬರುವ ಕಾಂಡ ಕೊರಕ, ಸುರುಳಿ ಕೀಟ, ಕಂದು ಜಿಗಿ ಹುಳು, ಕಣೇ ನೊಣ ಸೇರಿ ವಿವಿಧ ಕೀಟಗಳ ಹಾವಳಿಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸಮಗ್ರ ಕೀಟ ನಿರ್ವಹಣಾ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು.
ಕೆವಿಕೆ ಕೃಷಿ ವಿಜ್ಞಾನಿ ಡಾ.ಮಲ್ಲೇಶ್ ಮಾತನಾಡಿ, ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಗೊಬ್ಬರ ಬಳಸುವುದರಿಂದ ಅನಗತ್ಯ ಉತ್ಪಾದನಾ ವೆಚ್ಚ ಕಡಿಮೆ ಆಗಲಿದೆ. ಜತೆಗೆ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು. ಕೃಷಿ ಇಲಾಖೆ ಸಿಬ್ಬಂದಿ ವಿದ್ಯಾವತಿ, ಮಂಜುನಾಥ, ಗೋಣೆಪ್ಪ ಹುಡೇದ್, ಶರಣಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net