ಮುಂಗಾರು ಬಿತ್ತನೆಗೆ ಬೀಜ-ಗೊಬ್ಬರ ದಾಸ್ತಾನಿರಿಸಿ

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬಿತ್ತನೆ ಬೀಜ-ಗೊಬ್ಬರ ವಿತರಣೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಕೃಷ್ಣಪ್ಪ ಬಣದ ಸದಸ್ಯರು ಗಂಗಾವತಿ ಕೃಷಿ ಇಲಾಖೆ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು. ಸಮಿತಿ ವಿಭಾಗೀಯ ಸಂಚಾಲಕ ಹಂಪೇಶ ಜಿ.ಹರಿಗೋಲು, ಪದಾಧಿಕಾರಿಗಳಾದ ಯಮನೂರಪ್ಪ ನಾಯಕ, ದುರುಗಪ್ಪ ಐಹೊಳೆ, ದುರುಗಪ್ಪ ಹೊಸಳ್ಳಿ, ಆರ್.ಕೆ.ರಮೇಶ ಇತರರಿದ್ದರು.

Published on
ಗಂಗಾವತಿ: ಮುಂಗಾರ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬಿತ್ತನೆ ಬೀಜ-ಗೊಬ್ಬರ ಮತ್ತು ಕೃಷಿ ಉಪಕರಣಗಳ ವಿತರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಕೃಷ್ಣಪ್ಪ ಬಣದ ಸದಸ್ಯರು ನಗರದ ಕೃಷಿ ಇಲಾಖೆ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಸಹಾಯಕ ಕೃಷಿ ನಿರ್ದೇಶಕ ಶಿವಶೇಖರ ಪಾಟೀಲ್‌ಗೆ ಮನವಿ ಸಲ್ಲಿಸಿದರು.
ಸಮಿತಿ ವಿಭಾಗೀಯ ಸಂಚಾಲಕ ಹಂಪೇಶ ಜಿ. ಹರಿಗೋಲು ಮಾತನಾಡಿ, ಮುಂಗಾರು ಹಂಗಾಮಿಗೆ ರೈತರು ಭೂಮಿ ಸಜ್ಜುಗೊಳಿಸುತ್ತಿದ್ದು, ಕೃಷಿ ಇಲಾಖೆಯಿಂದ ಸಕಾಲಕ್ಕೆ ಬೀಜ, ರಾಸಾಯನಿಕ ಗೊಬ್ಬರ, ಕೀಟ ನಾಶಕ, ಕೃಷಿ ಉಪಕರಣಗಳನ್ನು ವಿತರಿಸುವ ವ್ಯವಸ್ಥೆಯಾಗಬೇಕಿದೆ. ಮೀಸಲು ವರ್ಗಕ್ಕಿರುವ ಸಹಾಯಧನ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸಬೇಕಿದ್ದು ಭತ್ತ, ಶೇಂಗಾ, ತೊಗರಿ, ಜೋಳ, ಸಜ್ಜೆ ಬೀಜಗಳನ್ನು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಬೇಕು. ನಕಲಿ ಬೀಜ, ರಸಗೊಬ್ಬರ ವಿತರಕರ ಬಗ್ಗೆ ಜಾಗೃತರಾಗಬೇಕಿದ್ದು, ರೈತರನ್ನು ವಂಚಿಸುವ ಕಂಪನಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಪ್ರಕೃತಿವಿಕೋಪಕ್ಕೆ ತುತ್ತಾಗುವ ಕೃಷಿ ಭೂಮಿಗಳ ರೈತರಿಗೆ ಸಕಾಲಕ್ಕೆ ಪರಿಹಾರ ವಿತರಿಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಯಮನೂರಪ್ಪ ನಾಯಕ, ದುರುಗಪ್ಪ ಐಹೊಳೆ, ದುರುಗಪ್ಪ ಹೊಸಳ್ಳಿ, ಆರ್.ಕೆ.ರಮೇಶ, ಬಸವರಾಜ ಕುರುಬರ್, ಗೋವಿಂದಪ್ಪ ಸಂಗಾಪುರ, ದುರುಗೇಶ ಹರಿಗೋಲು, ಯಮನೂರಪ್ಪ ಮರಳಿ, ಹುಲುಗಪ್ಪ ಭಜಂತ್ರಿ, ಹನುಮಂತಪ್ಪ ಬಳ್ಳಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net