15 ದಿನಗಳಿಗೊಮ್ಮೆ ಸಭೆ ಸೇರಲು ನಿರ್ಧಾರ

ಗಂಗಾವತಿ ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಮುಖಂಡರ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಭೆ ನಡೆಯಿತು. ಮುಖ್ಯಶಿಕ್ಷಕ ಶ್ರೀನಿವಾಸ, ಮುಖಂಡರಾದ ಮಲ್ಲಿಕಾರ್ಜುನ ಹೊಸ್ಕೇರಾ, ಎಂ.ಎಸ್.ಉಲ್ಲಾಸ್, ಆಸ್ಿ ಕೆ. ಸನ್ನಿಕ್ ಇತರರಿದ್ದರು.
ಗಂಗಾವತಿ ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಮುಖಂಡರ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಭೆ ನಡೆಯಿತು. ಮುಖ್ಯಶಿಕ್ಷಕ ಶ್ರೀನಿವಾಸ, ಮುಖಂಡರಾದ ಮಲ್ಲಿಕಾರ್ಜುನ ಹೊಸ್ಕೇರಾ, ಎಂ.ಎಸ್.ಉಲ್ಲಾಸ್, ಆಸ್ಿ ಕೆ. ಸನ್ನಿಕ್ ಇತರರಿದ್ದರು.
Published on
ಗಂಗಾವತಿ: ನಗರದ ಗುಂಡಮ್ಮ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಮುಖಂಡರ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಭೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ವಾರ್ಡ್ ಮುಖಂಡರು ಕಳವಳ ವ್ಯಕ್ತಪಡಿಸಿದ್ದು, ದಾಖಲಾತಿ ಆಂದೋಲನ ಹೆಚ್ಚಳಕ್ಕಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಲಾಯಿತು.
ಸಭೆಯಲ್ಲಿ ಶೌಚಗೃಹ ನಿರ್ವಹಣೆ, ಆಟದ ಮೈದಾನ ಸ್ವಚ್ಛತೆ, ಶುದ್ಧ ಕುಡಿವ ನೀರು ಪೂರೈಕೆ ಮತ್ತು ಕಲಿಕಾಮಟ್ಟ ಹೆಚ್ಚಳಕ್ಕೆ ಪೂರಕವಾದ ಯೋಜನೆ ಹಮ್ಮಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗುವ ದಾಖಲಾತಿ ಆಂದೋಲನದಲ್ಲಿ ವಾರ್ಡ್ ಮುಖಂಡರು ಸಕ್ರಿಯಪಾಲ್ಗೊಂಡು, ಮನೆಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಮನವಿ ಮಾಡುವ ಕುರಿತು ಚರ್ಚಿಸಲಾಯಿತು.
ಮುಖ್ಯಶಿಕ್ಷಕ ಶ್ರೀನಿವಾಸ ಮಾತನಾಡಿ, ಶಾಲಾಭಿವೃದ್ಧಿಗೆ ಪಾಲಕರು ಮತ್ತು ವಾರ್ಡ್ ಮುಖಂಡರು ಉಪಯುಕ್ತ ಸಲಹೆ ನೀಡಿದ್ದು, 15 ದಿನಗಳಿಗೊಮ್ಮೆ ಸಭೆ ಸೇರುವ ನಿರ್ಧಾರ ಕೈಗೊಳ್ಳಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಳ ಜತೆಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.
ವಾರ್ಡ್ ಮುಖಂಡರಾದ ಮಲ್ಲಿಕಾರ್ಜುನ ಹೊಸ್ಕೇರಾ, ಎಂ.ಎಸ್.ಉಲ್ಲಾಸ್, ಎಂ.ಇಜಾಫ್, ಆಸ್ಿ ಕೆ. ಸನ್ನಿಕ್, ಹುಸೇನ್‌ಸಾಬ್, ಮೌಲಾಹುಸೇನ್, ಶೇಖ್, ಮಹೆಬೂಬ್, ಶಿಕ್ಷಕ ಪ್ರಕಾಶ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net