ಮೀಸಲು ಅನ್ಯಾಯ ಸರಿಪಡಿಸಿ

ಎಸ್ಸಿ-ಎಸ್ಟಿ ಒಳ ಮೀಸಲು ಜಾರಿಗೆ ಆಗ್ರಹಿಸಿ ಜಿಲ್ಲೆಯ ಎಸ್ಸಿ-ಎಸ್ಟಿ ವಕೀಲರ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಕೀಲರಾದ   ಡಿ.ಎಂ. ಪೂಜಾರ್ ವೀರೂಪಾಕ್ಷಪ್ಪ ಕಟ್ಟಿಮನಿ, ಎಸ್.ಎಚ್. ಸುರಪುರ, ಆರ್.ಎಂ. ಬನ್ನಿಕೊಪ್ಪ, ಎಸ್.ಎಚ್. ಬುನ್ನಳ್ಳಿ ಇತರರಿದ್ದರು.
ಎಸ್ಸಿ-ಎಸ್ಟಿ ಒಳ ಮೀಸಲು ಜಾರಿಗೆ ಆಗ್ರಹಿಸಿ ಜಿಲ್ಲೆಯ ಎಸ್ಸಿ-ಎಸ್ಟಿ ವಕೀಲರ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಕೀಲರಾದ ಡಿ.ಎಂ. ಪೂಜಾರ್ ವೀರೂಪಾಕ್ಷಪ್ಪ ಕಟ್ಟಿಮನಿ, ಎಸ್.ಎಚ್. ಸುರಪುರ, ಆರ್.ಎಂ. ಬನ್ನಿಕೊಪ್ಪ, ಎಸ್.ಎಚ್. ಬುನ್ನಳ್ಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಸಿ-ಎಸ್ಟಿ ವಕೀಲರ ಒಕ್ಕೂಟದ ಪದಾಧಿಕಾರಿಗಳ ಆಗ್ರಹ
ಕೊಪ್ಪಳ: ಎಸ್ಸಿ-ಎಸ್ಟಿ ಒಳ ಮೀಸಲು ಜಾರಿಗೆ ಆಗ್ರಹಿಸಿ ಜಿಲ್ಲೆಯ ಎಸ್ಸಿ-ಎಸ್ಟಿ ವಕೀಲರ ಒಕ್ಕೂಟದ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಶಿಫಾರಸಿನಂತೆ 101 ಜಾತಿಗಳನ್ನು ವರ್ಗೀಕರಿಸಿ ವಾದಿಗ ಮತ್ತು ಇತರ ಜಾತಿಗಳಿಗೆ ಶೇ.6 ಒಳ ಮೀಸಲಾತಿ ನೀಡಬೇಕು. ಹೊಸಮೀಸಲಾತಿ ನೀತಿಯನ್ನು ಗಾಳಿಗೆತೂರಿ ಹಳೆಯ ಪದ್ಧತಿಯಡಿ 56,432 ಹುದ್ದೆಗಳನ್ನು ಭರ್ತಿ ವಾಡಲು ಹೊರಟಿರುವ ಸರ್ಕಾರದ ಕ್ರಮ ಖಂಡನೀಯ. ಒಳ ಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಹೊಸ ಅಧಿಸೂಚನೆ ಹೊರಡಿಸಬಾರದು. ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಹೀಗಿದ್ದರೂ ಸರ್ಕಾರ ವಿಳಂಬ ವಾಡುತ್ತಿರುವುದು ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ವಾಡುತ್ತಿರುವ ದ್ರೋಹವಾಗಿದೆ ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿಗಳಿಗೆ ಶೇ.17 ಹಾಗೂ ಪಂಗಡಗಳಿಗೆ ಶೇ.7 ಮೀಸಲಾತಿ ಅನ್ವಯವಾಗದಿದ್ದರೆ ಶೋಷಿತ ಸಮುದಾಯಗಳಿಗೆ ದೊಡ್ಡ ಅನ್ಯಾಯವಾಗಲಿದೆ. ಒಂದು ವೇಳೆ ಸರ್ಕಾರ ಈ ಬೇಡಿಕೆಗಳನ್ನು ನಿರ್ಲಕ್ಷಿಸಿ ಹಳೆಯ ಪದ್ಧತಿಯಲ್ಲೇ ನೇಮಕಾತಿ ಮುಂದುವರಿಸಿದರೆ ರಾಜ್ಯಾದ್ಯಂತ ಇರುವ ಎಸ್‌ಸಿಎಸ್‌ಟಿ ಸಮುದಾಯದ ವಕೀಲರು ಒಗ್ಗೂಡಿ ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಹೋರಾಟ ಸಮಿತಿಯ ಮುಖಂಡರು ಎಚ್ಚರಿಕೆ ನೀಡಿದರು. ನಗರದ ಬಸವೇಶ್ವರ ವೃತ್ತದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ವಕೀಲರಾದ ಡಿ.ಎಂ. ಪೂಜಾರ್ ವೀರೂಪಾಕ್ಷಪ್ಪ ಕಟ್ಟಿಮನಿ, ಎಸ್.ಎಚ್. ಸುರಪುರ, ಆರ್.ಎಂ. ಬನ್ನಿಕೊಪ್ಪ, ಎಸ್.ಎಚ್. ಬುನ್ನಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net