ನರೇಗಾ ಉಳಿಸಿ, ವಿಬಿಜಿ ಗ್ರಾಮ್​ ಜಿ ರದ್ದುಗೊಳಿಸಿ

ನರೇಗಾ ಉಳಿಸಿ, ವಿಬಿಜಿ ಗ್ರಾಮ್​ ಜಿ ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯ ಕೃಷಿ ಕೂಲಿಕಾರರ ಸಂಘದಿಂದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಮಾಡಲಾಯಿತು. ರಾಜ್ಯದ್ಯಕ್ಷ ಚಂದ್ರಪ್ಪ ಹೊಸಕೆರಾ, ಜಿಲ್ಲಾಧ್ಯಕ್ಷ ಬಸವರಾಜ ಮರಕುಂಬಿ, ಜಿಲ್ಲಾ ಕಾರ್ಯದರ್ಶಿ ಸುಂಕಪ್ಪ ಗದಗ್​, ಪ್ರಮುಖರಾದ ಹುಸೇನಪ್ಪ ಕೆ, ರಮೇಶ್​ ಬಡಿಗೇರ್​, ಶಿವಣ್ಣ ಸಿಂಗನಾಳ, ಇತರರಿದ್ದರು.
ನರೇಗಾ ಉಳಿಸಿ, ವಿಬಿಜಿ ಗ್ರಾಮ್​ ಜಿ ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯ ಕೃಷಿ ಕೂಲಿಕಾರರ ಸಂಘದಿಂದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಮಾಡಲಾಯಿತು. ರಾಜ್ಯದ್ಯಕ್ಷ ಚಂದ್ರಪ್ಪ ಹೊಸಕೆರಾ, ಜಿಲ್ಲಾಧ್ಯಕ್ಷ ಬಸವರಾಜ ಮರಕುಂಬಿ, ಜಿಲ್ಲಾ ಕಾರ್ಯದರ್ಶಿ ಸುಂಕಪ್ಪ ಗದಗ್​, ಪ್ರಮುಖರಾದ ಹುಸೇನಪ್ಪ ಕೆ, ರಮೇಶ್​ ಬಡಿಗೇರ್​, ಶಿವಣ್ಣ ಸಿಂಗನಾಳ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಕೂಲಿಕಾರರ ಸಂಘ ಆಗ್ರಹ
ಕೊಪ್ಪಳ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮುಂದುವರಿಸಿ, ಅದರ ಬದಲಿಗೆ ಜಾರಿಗೆ ತರಲಾಗುತ್ತಿದೆ ಎನ್ನಲಾದ ವಿಬಿಜಿ ಗ್ರಾಮ್​ ಜಿ ವ್ಯವಸ್ಥೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಸೋಮವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ದುರ್ಬಲಗೊಳಿಸಿ ಕಾರ್ಪೊರೇಟ್​ ಪರ ನೀತಿಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿಗೆ ಮುಂದಾಗಿದೆ ಎಂದು ಆರೋಪಿಸಿದರು. ಜಿಲ್ಲೆಯನ್ನೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ಎಲ್ಲ ಗ್ರಾಮಗಳಲ್ಲಿ ಕೂಡಲೇ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ನರೇಗಾ ಯೋಜನೆಯನ್ನು ಮುಂದುವರಿಸಿ, ಕೂಲಿಕಾರರಿಗೆ ತಕ್ಷಣ ಕೆಲಸ ಒದಗಿಸಬೇಕು. ರಾಜ್ಯ ಸರ್ಕಾರದ ಕನಿಷ್ಠ ಕೂಲಿ ಅಥವಾ ದಿನಕ್ಕೆ 700 ರೂ. ಕೂಲಿ ನಿಗದಿಪಡಿಸಬೇಕು. ಎನ್​ಎಂಎಂಎಸ್​ ಹಾಗೂ ಇ-ಕೆವೈಸಿ ಸೇರಿದಂತೆ ಅವೈಜ್ಞಾನಿಕ ತಂತ್ರಜ್ಞಾನ ಬಳಕೆ ಕೈಬಿಟ್ಟು, ಸರಳ ರೀತಿಯಲ್ಲಿ ಹಾಜರಾತಿ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು.
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ 200 ದಿನಗಳ ಉದ್ಯೋಗ ನೀಡಬೇಕು. ಯುದ್ಧದ ನೆಪದಲ್ಲಿ ಏರಿಕೆಯಾದ ದಿನಬಳಕೆ ವಸ್ತುಗಳ ಬೆಲೆಯನ್ನು ತಕ್ಷಣ ಇಳಿಸಬೇಕು. ಗಂಗಾವತಿ, ಕಾರಟಗಿ, ಕನಕಗಿರಿ, ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಹಾಗೂ ಕುಕನೂರು ಭಾಗಗಳಲ್ಲಿ ನಾಲೆ, ಕಾಲುವೆ ಮತ್ತು ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳ ಅಧಿಕಾರಿಗಳು ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಉದ್ಯೋಗ ಖಾತ್ರಿ ಅನುಷ್ಠಾನದ ಕುರಿತು ಚರ್ಚಿಸಬೇಕು. ಕೂಲಿಕಾರರಿಗೆ ಪೂರ್ಣ ಪ್ರಮಾಣದ ಕೂಲಿ ಪಾವತಿಸಬೇಕು. ಜೊತೆಗೆ ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ ಹಾಗೂ ವೃದ್ಧಾಪ್ಯ ವೇತನ ಸ್ಥಗಿತಗೊಂಡಿರುವ ಫಲಾನುಭವಿಗಳಿಗೆ ಕೂಡಲೇ ಸೌಲಭ್ಯ ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕ ಕೃಷಿ ಕೂಲಿಕಾರರ ರಾಜ್ಯದ್ಯಕ್ಷ ಚಂದ್ರಪ್ಪ ಹೊಸಕೆರಾ, ಜಿಲ್ಲಾಧ್ಯಕ್ಷ ಬಸವರಾಜ ಮರಕುಂಬಿ, ಜಿಲ್ಲಾ ಕಾರ್ಯದರ್ಶಿ ಸುಂಕಪ್ಪ ಗದಗ್​, ಪ್ರಮುಖರಾದ ಹುಸೇನಪ್ಪ ಕೆ, ರಮೇಶ್​ ಬಡಿಗೇರ್​, ಶಿವಣ್ಣ ಸಿಂಗನಾಳ, ಮಂಜುನಾಥ್​ ಹಟ್ಟಿ, ಗಂಗಾಧರ ತೋಟಪ್ಪ, ಅಡಿವಪ್ಪ, ನಾಗರಾಜ್​ ಉತ್ತನೂರು, ಅಕ್ಕಮ್ಮ, ದುರ್ಗಮ್ಮ, ನಾಗಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net