ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಸಹಕಾರ ಸಪ್ತಾಹ ನಿಮಿತ್ತ ಸಸಿ ನೆಡಲಾಯಿತು. ಮುಖ್ಯ ಶಿಕ್ಷಕ ಶರಣಪ್ಪ ರೇವಣಕಿ, ಶಿಕ್ಷಕರಾದ ಮಲ್ಲಪ್ಪ ಜುಮ್ಮನ್ನವರ್, ಬಸಲಿಂಗಪ್ಪ ಅರಿಕೇರಿ, ಬಸಲಿಂಗಪ್ಪ ಯಲಬುರ್ಗಿ, ಈಶಪ್ಪ ನೆಲಗಣಿ, ಶರಣಪ್ಪ ತಳವಾರ, ವೀರನಗೌಡ ನಿಂಬನಗೌಡ ಇದ್ದರು.
ಯಲಬುರ್ಗಾ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಮುಖ್ಯ ಶಿಕ್ಷಕ ಶರಣಪ್ಪ ರೇವಣಕಿ ಹೇಳಿದರು.
ತಾಲೂಕಿನ ಬಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಹಕಾರ ಸಪ್ತಾಹ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಅಭಿಯಾನದಲ್ಲಿ ಮಾತನಾಡಿದರು. ಸಸಿ ಸಂರಕ್ಷಣೆ ಎಲ್ಲರ ಹೊಣೆಗಾರಿಕೆಯಾಗಿದ್ದು, ಹಸಿರು ವಾತಾವರಣ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಭಾರತ ಸರ್ಕಾರದಲ್ಲಿ ಸಹಕಾರ ಸಚಿವಾಲಯ ಸ್ಥಾಪನೆಯಾಗಿ ಐದು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಹಕಾರದಿಂದ ಸಮೃದ್ಧಿ ಎಂಬ ಧ್ಯೇಯದಡಿ ರಾಜ್ಯಾದ್ಯಂತ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ಈ ನಿಮಿತ್ತ ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟ, ಸಹಕಾರ ಇಲಾಖೆ ಕೊಪ್ಪಳ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಸಹಯೋಗದಲ್ಲಿ ಪರಿಸರ ಸಂರಕ್ಷಣೆ ಮತ್ತು ಹಸಿರು ವಾತಾವರಣ ನಿರ್ಮಾಣ ಉದ್ದೇಶದಿಂದ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಕರಾದ ಮಲ್ಲಪ್ಪ ಜುಮ್ಮನ್ನವರ್, ಬಸಲಿಂಗಪ್ಪ ಅರಿಕೇರಿ, ಬಸಲಿಂಗಪ್ಪ ಯಲಬುರ್ಗಿ, ಈಶಪ್ಪ ನೆಲಗಣಿ, ಶರಣಪ್ಪ ತಳವಾರ, ವೀರನಗೌಡ ನಿಂಬನಗೌಡ, ಶರಣಬಸಪ್ಪ ಬಿಲ್ಲರ್ ಹಾಗೂ ಸಂಘದ ಕಾರ್ಯದರ್ಶಿ ಪವನ್ ಕುಮಾರ್ ಕುಲಕರ್ಣಿ, ಮಾಂತೇಶ್ ಶೆಟ್ಟರ್ ಇದ್ದರು.