ಮರಳು ಬ್ಯಾಗ್​ ಹಾಕಿ ನೀರು ಹರಿಸಲಾಗುವುದು

ಬಸಾಪುರ ಬಳಿ ಮೈಲ್​ 13ರ ಬಳಿ ಎಡದಂಡೆ ನಾಲೆ ಕಾಮಗಾರಿ ವೀಸಿದ ಸಚಿವ ಬೋಸರಾಜು.
ಬಸಾಪುರ ಬಳಿ ಮೈಲ್​ 13ರ ಬಳಿ ಎಡದಂಡೆ ನಾಲೆ ಕಾಮಗಾರಿ ವೀಸಿದ ಸಚಿವ ಬೋಸರಾಜು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಬೋಸರಾಜು ಹೇಳಿಕೆ
  • ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ
ಮುನಿರಾಬಾದ್​:ಎಡದಂಡೆ ಕಾಲುವೆ ಮರು ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಸದ್ಯಕ್ಕೆ ಮರಳು ಚೀಲ ಅಳವಡಿಸಿ ಕೊಪ್ಪಳ&ರಾಯಚೂರು ಭಾಗಕ್ಕೆ ಕುಡಿವ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್​.ಎಸ್​.ಬೋಸರಾಜು ಭರವಸೆ ನೀಡಿದರು.
ಶುಕ್ರವಾರ ಕಾಲುವೆ ಕಾಮಗಾರಿ ವೀಸಿ ಮಾತನಾಡಿದರು.
13ನೇ ಮೈಲ್​ನಲ್ಲಿ ಬೋಂಗಾ ಬಿದ್ದು ಕಾಲುವೆ ಒಡೆದಿದೆ. ಅಧಿಕಾರಿಗಳು ಮುನ್ನೆಚ್ಚರಿಕೆವಹಿಸಿದ್ದರೆ ಅನಾಹುತ ಆಗುತ್ತಿರಲಿಲ್ಲ. ರ್ನಿಲಕ್ಷ$್ಯವಹಿಸಿದ್ದಕ್ಕೆ ಅವಡ ಆಗಿದೆ. ಈ ಬಗ್ಗೆ ಉದಾಸೀನ ತೋರಿದ ಅಧಿಕಾರಿಗಳ ವಿರುದ್ಧ ವರದಿ ನೀಡುವಂತೆ ಸಿಇಗೆ ಸೂಚಿಸಿರುವೆ. ನೀರಾವರಿ ಸಚವರಿಗೆ ಮಾತನಾಡಿ ಕ್ರಮಕ್ಕೆ ಮನವಿ ಮಾಡುವೆ. ಒಂದು ದಿನದಲ್ಲಿ ಮರಳು ಬ್ಯಾಗ್​ ಹಾಕಿ ಕನಿಷ್ಠ 7&8 ಅಡಿ ಗಟ್ಟಿ ಮಾಡಿ ನೀರು ಹರಿಸಲು ತಿಳಿಸಲಾಗಿದೆ. ನಿವೃತ್ತ ಸಿಇ ಎಸ್​.ಎಚ್​.ಮಂಜಪ್ಪ ಆಗಮಿಸುತ್ತಿದ್ದು, ಅವರ ನೇತೃತ್ವದಲ್ಲಿ ಕಾಮಗಾರಿ ನಡೆಯಲಿದೆ. ಕನಿಷ್ಠ 1500 ಕ್ಯೂಸೆಕ್​ ನೀರು ಹರಿಸಿ ಕುಡಿವ ನೀರು ನೀಡುವಂತೆ ಸೂಚಿಸಲಾಗಿದೆ ಎಂದರು.
92 ಎಕರೆ ಭತ್ತ ನಾಶವಾಗಿದೆ. ಕಂದಾಯ ಇಲಾಖೆಯಿಂದ ಪರಿಹಾರ ನೀಡಲು ಅವಕಾಶವಿಲ್ಲ. ನೀರಾವರಿ ನಿಗಮದಿಂದಲೇ ಪರಿಹಾರ ಕೊಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿಶೇಷವೆಂದು ಪರಿಗಣಿಸಲು ಮನವಿ ಮಾಡಿದ್ದೇವೆ. ಹೆಕ್ಟೇರ್​ಗೆ 17 ಸಾವಿರ ರೂ.ನಂತೆ ನೀಡಲು ಯೋಜಿಸಲಾಗಿದೆ. 11ಎ ವಿತರಣೆ ನಾಲೆವರೆಗೆ ನೀರು ಕೊಡಲಾಗುವುದು. ಕಾಲುವೆ ಬಲಪಡಿಸುವ ನಿಟ್ಟಿನಲ್ಲಿ ತಜ್ಞರ ತಂಡ ವರದಿ ಸಲ್ಲಿಸಿದೆ. ಈ ಬಗ್ಗೆ ಶಾಸಕ, ಸಚಿವರು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ತಕ್ಷಣ 250 ಕೋಟಿ ರೂ. ಅನುದಾನ ನೀಡಲು ಜಲಸಂಪನ್ಮೂಲ ಸಚಿವರು ಒಪ್ಪಿಕೊಂಡಿದ್ದಾರೆ. ಆದ್ಯತೆ ಅನುಸಾರ ಐದು ವಿಭಾಗಗಳಲ್ಲಿ ಕಾಲುವೆ ಕಾಮಗಾರಿ ನಡೆಸಲಾಗುವುದು ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net