29 ಗ್ರಾಪಂ ವ್ಯಾಪ್ತಿ ಸಣ್ಣಪುಟ್ಟ ಹಳ್ಳಗಳಲ್ಲಿ ಮರಳುಗಾರಿಕೆಗೆ ಅವಕಾಶ ನೀಡಿದೆ. ಉಳಿದಂತೆ ಕೊಪ್ಪಳ ತಾಲೂಕಿನಲ್ಲಿ ಮೂರು, ಕಾರಟಗಿ&ಕನಕಗಿರಿ ತಾಲೂಕಿನಲ್ಲಿ ಮೂರು, ಯಲಬುರ್ಗಾ&ಕುಕನೂರು ವ್ಯಾಪ್ತಿಯಲ್ಲಿ ನಾಲ್ಕು, ಕುಷ್ಟಗಿಯಲ್ಲಿ ಎರಡು ಕಡೆ ಈ ಮೊದಲು ಬ್ಲಾಕ್ ರಚಿಸಲಾಗಿತ್ತು. 29 ಪಟ್ಟಾ ಜಮೀನುಗಳಲ್ಲಿ ಮಂಜೂರಾತಿ ನೀಡಿದ್ದು, 13 ಸಕ್ರಿಯವಾಗಿದ್ದವು. ಹಿರೇಹಳ್ಳ ವ್ಯಾಪ್ತಿಯಲ್ಲಿ ಅಕ್ರಮ ದಿನ ಕಳೆದಂತೆ ಹೆಚ್ಚುತ್ತಿದ್ದು, ನಿಯಂತ್ರಣ ಅಸಾಧ್ಯ ಎಂಬಂತಾಗುತ್ತಿದೆ. ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸಿ ಬೋಟ್ ತುಂಡರಿಸಿದ ಟನೆಗಳು ನಡೆದಿವೆ.