ಸಾಹಿಲ್​ ಬಾಗ್ಲಾ ಕೊಪ್ಪಳ ಎಸ್ಪಿ

ಸಾಹಿಲ್​ ಬಾಗ್ಲಾ
ಸಾಹಿಲ್​ ಬಾಗ್ಲಾ
Published on

ಪ್ರಮುಖ ಮುಖ್ಯಾಂಶಗಳು

  • ಡಾ.ರಾಮ್​ ಎಲ್​ ಅರಸಿದ್ದಿ ವರ್ಗಾವಣೆ

ಕೊಪ್ಪಳ: ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ರಾಮ್​ ಎಲ್​.ಅರಸಿದ್ದಿ ವರ್ಗಾವಣೆಯಾಗಿದ್ದು, ನೂತನ ಎಸ್ಪಿಯಾಗಿ ಸಾಹಿಲ್​ ಬಾಗ್ಲಾ ಅವರನ್ನು ನಿಯೋಜಿಸಿ ಸರ್ಕಾರ ಶನಿವಾರ ಆದೇಶಿಸಿದೆ.

2024ರ ಜುಲೈನಲ್ಲಿ ಡಾ.ರಾಮ್​ ಎಲ್​.ಅರಸಿದ್ದಿ ಕೊಪ್ಪಳ ಎಸ್ಪಿಯಾಗಿ ಅಧಿಕಾರವಹಿಸಿಕೊಂಡಿದ್ದರು. ಎರಡು ವರ್ಷ ಒಂದು ತಿಂಗಳು ಅಧಿಕಾರ ಪೂರೈಸಿದ್ದು, ಸದ್ಯ ವರ್ಗಾವಣೆಗೊಂಡಿದ್ದಾರೆ. ಬೆಂಗಳೂರು ಪೂರ್ವ ಸಂಚಾರ ವಿಭಾಗದ ಉಪ ಅಧೀಕ್ಷಕರಾಗಿದ್ದ ಸಾಹಿಲ್​ ಬಾಗ್ಲಾ ಅವರನ್ನು ಕೊಪ್ಪಳ ಎಸ್ಪಿಯಾಗಿ ವರ್ಗಾಯಿಸಲಾಗಿದೆ. 2018ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net