ಗ್ರಾಮೀಣ ಜನರು ಅಂಚೆ ಸೇವೆ ಪಡೆಯಲಿ

ಹಿಟ್ನಾಳ ಗ್ರಾಮದಲ್ಲಿ ನಿರ್ಮಿಸಲಾದ ಅಂಚೆ ಕಚೇರಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಸದ ರಾಜಶೇಖರ ಹಿಟ್ನಾಳ  ಚಾಲನೆ ನೀಡಿದರು. ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಪ್ರಮುಖರಾದ ಶಿವಸ್ವಾಮಿ, ಉದ್ಧವ್ ಕುಲಕರ್ಣಿ, ಮಾರುತಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ರಾಜಶೇಖರ ಹಿಟ್ನಾಳ ಸಲಹೆ
  • ಮುನಿರಾಬಾದ್ ಹಿಟ್ನಾಳ ಅಂಚೆ ಕಚೇರಿ ಉದ್ಘಾಟನೆ
ಮುನಿರಾಬಾದ್: ಗ್ರಾಮೀಣ ಜನರಿಗೆ ಕೇಂದ್ರ ಸರ್ಕಾರದ ಅಂಚೆ ಸೇವೆಗಳು ಸುಸಜ್ಜಿತ ವಾತಾವರಣದಲ್ಲಿ ದೊರೆಯಬೇಕೆನ್ನುವ ಉದ್ದೇಶದಿಂದ ದೇಶದಲ್ಲೇ ಮೊದಲು ನಮ್ಮ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಸಿಎಸ್‌ಐಆರ್ ಅನುದಾನದಲ್ಲಿ ಅಂಚೆ ಕಚೇರಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಸಮೀಪದ ಹಿಟ್ನಾಳ ಹಾಗೂ ಅಗಳಕೇರಾ ಗ್ರಾಮಗಳಲ್ಲಿ ನಿರ್ಮಿಸಲಾದ ಅಂಚೆ ಕಚೇರಿ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಆರ್ಥಿಕ ಚಟುವಟಿಕೆಗಳ ಪ್ರಮುಖ ಕೇಂದ್ರಗಳಾಗಿರುವ ಅಂಚೆ ಕಚೇರಿಗಳಿಗೆ ಶಾಶ್ವತ ಕಟ್ಟಡ ಕಲ್ಪಿಸಿಕೊಡುವುದು ಈ ಯೋಜನೆಯ ಮುಖ್ಯ ಆಶಯವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಅಂಚೆ ಇಲಾಖೆ ಅಧೀಕ್ಷಕ ನಾಗರಾಜ ಪಾಟೀಲ್, ಕಿರ್ಲೋಸ್ಕರ್ ಹಾಗೂ ಮುಕ್ಕುಂದ ಸುಮಿ ಕಂಪನಿಗಳ ಉನ್ನತ ಅಧಿಕಾರಿಗಳು, ಪ್ರಮುಖರಾದ ಶಿವಸ್ವಾಮಿ, ಉದ್ಧವ್ ಕುಲಕರ್ಣಿ, ಮಾರುತಿ, ರಾಜಶೇಖರ, ಅಂಚೆ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net