ಪರಿಣಾಮಕಾರಿ ಕಾರ್ಯಕ್ರಮಕ್ಕಾಗಿ ರೋಟರಿ ಕ್ಲಬ್ ಸೇವೆ

ಗಂಗಾವತಿಯಲ್ಲಿ ರೋಟರಿ ಕ್ಲಬ್ ಕಿಷ್ಕಿಂದ ಘಟಕದಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾ ಪ್ರಾಂತಪಾಲ ತ್ರಿವಿಕ್ರಮ್ ಜೋಶಿ ಉದ್ಘಾಟಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹಿರಿಯ ವೈದ್ಯ ಜಿ.ಚಂದ್ರಪ್ಪ, ಅಧ್ಯಕ್ಷ ಪ್ರಶಾಂತ ಪರಗಿ, ಕಾರ್ಯದರ್ಶಿ ಸತೀಶ ಭೈರಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಪ್ರಾಂತಪಾಲ ತ್ರಿವಿಕ್ರಮ್ ಜೋಶಿ ಹೇಳಿಕೆ
  • ಪದಾಧಿಕಾರಿಗಳ ಪದಗ್ರಹಣ
ಗಂಗಾವತಿ: ಸ್ವಾರ್ಥವಿಲ್ಲದ ಸೇವೆ ಪರಿಕಲ್ಪನೆಯಡಿ ಆರಂಭವಾದ ರೋಟರಿ ಕ್ಲಬ್ ದೇಶದಾದ್ಯಂತ 12ಲಕ್ಷ ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದು ಜಿಲ್ಲಾ ಪ್ರಾಂತಪಾಲ ತ್ರಿವಿಕ್ರಮ್ ಜೋಶಿ ಹೇಳಿದರು.
ಎಸ್‌ಎಲ್‌ಆರ್ ಂಕ್ಷನ್ ಹಾಲ್‌ನಲ್ಲಿ ರೋಟರಿ ಕ್ಲಬ್ ಕಿಷ್ಕಿಂದ ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ, ಆರೋಗ್ಯ ಮತ್ತು ಇತರೆ ಕ್ಷೇತ್ರದಲ್ಲಿ ಪರಿಣಾಮಕಾರಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿದೇಶದಲ್ಲಿ ಕ್ಲಬ್ ಅಸ್ತಿತ್ವಕ್ಕೆ ಬಂದಿದ್ದರೂ, ದೇಶದ ಸೇವಾ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದೆ. ಪೋಲಿಯೋ ಮುಕ್ತ ದೇಶಕ್ಕಾಗಿ ಕ್ಲಬ್ ಶ್ರಮಿಸುತ್ತಿದ್ದು, ಯಶಸ್ವಿಯಾಗಿದ್ದೇವೆ.
ಜಗತ್ತಿನ 200 ದೇಶಗಳಿಗೆ ಪೋಲಿಯೋ ವ್ಯಾಕ್ಸಿನ್ ವಿತರಿಸುವ ಕ್ಲಬ್, ವಿಶ್ವಶಾಂತಿಗಾಗಿ ಪ್ರಾರ್ಥಿಸುತ್ತಿದೆ. ಬ್ಲಡ್ ಬ್ಯಾಂಕ್, ಕ್ಯಾನ್ಸರ್ ಮತ್ತು ಹೃದಯ ರೋಗ ಆಸ್ಪತ್ರೆಗಳನ್ನು ಆರಂಭಿಸಲಾಗುತ್ತಿದ್ದು, ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಯುವಕರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಿ ಉದ್ಯೋಗದ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಸೇವಾ ಮನೋಭಾವ ವ್ಯಕ್ತಿತ್ವವನ್ನು ಬೆಳೆಸುತ್ತಿದ್ದು, ಸಾಂಕ ಪ್ರಯತ್ನಗಳು ಯಶಸ್ಸು ನೀಡಲಿವೆ. ಸಮಾಜಮುಖಿ ಚಟುವಟಿಕೆಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳು ಶ್ರಮಿಸಲಿ ಎಂದರು. ನಿಕಟಪೂರ್ವ ಅಧ್ಯಕ್ಷ ಮಹೇಶ ಸಾಗರ, ಅಧ್ಯಕ್ಷ ಪ್ರಶಾಂತ ಪರಗಿ, ಕಾರ್ಯದರ್ಶಿ ಸತೀಶ ಭೈರಿ, ಹಿರಿಯ ವೈದ್ಯ ಜಿ.ಚಂದ್ರಪ್ಪ, ಉದ್ಯಮಿ ಸಂತೋಷ ಕೆಲೋಜಿ, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರು, ಕ್ಲಬ್ ನಿಕಟಪೂರ್ವ ಕಾರ್ಯದರ್ಶಿ ಬಸವರಾಜ ಕುಂಬಾರ, ಸದಸ್ಯ ಸುರೇಶಗೌರಪ್ಪ ಇತರರಿದ್ದರು.
ಗಂಗಾವತಿಯಲ್ಲಿ ರೋಟರಿ ಕ್ಲಬ್ ಕಿಷ್ಕಿಂದ ಘಟಕದಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾ ಪ್ರಾಂತಪಾಲ ತ್ರಿವಿಕ್ರಮ್ ಜೋಶಿ ಉದ್ಘಾಟಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹಿರಿಯ ವೈದ್ಯ ಜಿ.ಚಂದ್ರಪ್ಪ, ಅಧ್ಯಕ್ಷ ಪ್ರಶಾಂತ ಪರಗಿ, ಕಾರ್ಯದರ್ಶಿ ಸತೀಶ ಭೈರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net