ಸಂಪೂರ್ಣ ಕೆಲಸಕ್ಕೆ ಪೂರ್ಣಕೂಲಿ

ಕೊಡದಾಳ ಗ್ರಾಮದಲ್ಲಿ ಆಯೋಜಿಸಿದ್ದ ರೋಜಗಾರ್ ದಿವಸ್ ಕಾರ್ಯಕ್ರಮದಲ್ಲಿ ಜಿಪಂ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ವಾತನಾಡಿದರು. ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಂಪಂ ಡಿಇಒ ಶರಣಪ್ಪ, ಗ್ರಾಮ ಕಾಯಕ ಮಿತ್ರ ಶ್ರೀದೇವಿ ಇದ್ದರು.
ಕೊಡದಾಳ ಗ್ರಾಮದಲ್ಲಿ ಆಯೋಜಿಸಿದ್ದ ರೋಜಗಾರ್ ದಿವಸ್ ಕಾರ್ಯಕ್ರಮದಲ್ಲಿ ಜಿಪಂ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ವಾತನಾಡಿದರು. ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಂಪಂ ಡಿಇಒ ಶರಣಪ್ಪ, ಗ್ರಾಮ ಕಾಯಕ ಮಿತ್ರ ಶ್ರೀದೇವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀನಿವಾಸ ಚಿತ್ರಗಾರ ಸೂಚನೆ ರೋಜಗಾರ್ ದಿನ ಆಚರಣೆ
ಕೊಪ್ಪಳ: ದಿನಕ್ಕೆ 370 ರೂ. ಕೂಲಿ ನಿಗದಿಪಡಿಸಿದ್ದು, ಕೂಲಿಕಾರರು ಸಂಪೂರ್ಣ ಕೆಲಸ ನಿರ್ವಹಿಸಿ ಸಂಪೂರ್ಣ ಹಣ ಪಡೆಯಬೇಕು ಎಂದು ಜಿಪಂ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಹೇಳಿದರು.
ತಾಲೂಕಿನ ಇರಕಲ್ಲಗಡಾ ಗ್ರಾಂಪಂನಿಂದ ಕೊಡದಾಳ ಗ್ರಾಮದ ವಿಜಯ ಮಹಾಂತಶ್ರೀ ವೇದಿಕೆಯಲ್ಲಿ ಗುರುವಾರ ಆಯೋಜಿಸಿದ್ದ ರೋಜಗಾರ್ ದಿನ ಕಾರ್ಯಕ್ರಮದಲ್ಲಿ ವಾತನಾಡಿದರು. ಬೇಸಿಗೆಯ ತೀವ್ರತೆ ಗಮನಿಸಿ ಆರೋಗ್ಯದತ್ತ ಕಾಳಜಿ ವಹಿಸಿ. 18 ವರ್ಷ ಮೇಲ್ಪಟ್ಟ ಕುಟುಂಬ ಸದಸ್ಯರು ಜಾಬ್‌ಕಾರ್ಡ್ ಬಳಸಿ ಕೆಲಸ ಪಡೆಯಲು ಕಡ್ಡಾಯವಾಗಿ ನಮೂನೆ-6 ಸಲ್ಲಿಸಬೇಕು. ಮೇ ಹಾಗೂ ಜೂನ್ ತಿಂಗಳಲ್ಲಿ 60 ದಿನಗಳ ಕೂಲಿ ಕೆಲಸ ಪಡೆಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ವಾತನಾಡಿ, ಪ್ರತಿ ಜಾಬ್‌ಕಾರ್ಡ್‌ಗೆ 100 ವಾನವ ದಿನಗಳ ಉದ್ಯೋಗ ನೀಡಲಾಗುತ್ತಿದ್ದು, ಗ್ರಾಮೀಣ ಕೂಲಿಕಾರರು ಸ್ಥಳೀಯವಾಗಿ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಯಕ ಬಂಧುಗಳ ಮೂಲಕ ಒಟ್ಟು 121 ಕೂಲಿಕಾರರಿಂದ ಫಾರಂ ನಂ.6 ಸ್ವೀಕರಿಸಲಾಯಿತು. ಗ್ರಾಂಪಂ ಡಿಇಒ ಶರಣಪ್ಪ, ನೌಕರ ಸಿದ್ರಾಮಯ್ಯಸ್ವಾಮಿ, ಗ್ರಾಮ ಕಾಯಕ ಮಿತ್ರ ಶ್ರೀದೇವಿ, ಕಾಯಕ ಬಂಧುಗಳಾದ ಹನಮಂತಪ್ಪ, ಮರಿಯಪ್ಪ, ಕಿರಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net